ನವದೆಹಲಿ: ದೇಶೀಯ ಲಘು ಯುದ್ಧವಿಮಾನ (ಎಲ್‌ಸಿಎ) ತೇಜಸ್ ಫೈಟರ್ ಜೆಟ್ ಎಲೈಟ್ 18 'ಫ್ಲೈಯಿಂಗ್ ಬುಲೆಟ್'ನ ಹಾರಾಟ ನಡೆಸಲು ಸ್ಕ್ವಾಡ್ರನ್ ಲೀಡರ್ ಮೋಹನಾ ಸಿಂಗ್ ಅನುಮತಿ ಪಡೆದಿದ್ದಾರೆ. ಈ ಮೂಲಕ ಪೈಟರ್ ಜೆಟ್‌ನ ಮೊದಲ ಮಹಿಳಾ ಪೈಲಟ್ ಎನ್ನುವ ಹೆಗ್ಗಳಿಕೆಗೆ ಮೋಹನಾ ಪಾತ್ರರಾಗಿದ್ದಾರೆ.

ಮೋಹನಾ ಅವರು ಎಂಟು ವರ್ಷಗಳ ಹಿಂದೆ ಸ್ಕ್ವಾಡ್ರನ್‌ಗೆ ಸೇರಿದ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿದ್ದರು
ಮೋಹನಾ ಸಿಂಗ್ ಅವರು ಜೋಧ್‌ಪುರದಲ್ಲಿ ಇತ್ತೀಚೆಗೆ ನಡೆದ 'ತರಂಗ್ ಶಕ್ತಿ' ಮಿಲಿಟರಿ ವ್ಯಾಯಾಮದಲ್ಲಿ ಪಾಲ್ಗೊಂಡಿದ್ದರು.
ರಕ್ಷಣಾ ಪಡೆಯ 'ತರಂಗ್ ಶಕ್ತಿ' ಮಿಲಿಟರಿ ವ್ಯಾಯಾಮವು 'ಮೇಕ್ ಇನ್ ಇಂಡಿಯಾ' ಬೆಂಬಲಿಸುವ ಅತಿ ದೊಡ್ಡ ಸಂದೇಶಗಳಲ್ಲಿ ಒಂದಾಗಿದೆ.
2016ರಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಫೈಟರ್ ಜೆಟ್ ಕಾಕ್‌ಪಿಟ್‌ಗಳಲ್ಲಿ ಕಾರ್ಯನಿರ್ವಸಹಿಸಲು ಅವಕಾಶ ನೀಡಿತ್ತು. ಆಗ ಮೋಹನಾ ಸಿಂಗ್ ಅವರು ಭಾವನಾ ಕಾಂತ್ ಮತ್ತು ಅವ್ನಿ ಚತುರ್ವೇದಿ ಅವರೊಂದಿಗೆ ಭಾರತೀಯ ವಾಯುಪಡೆಗೆ ಮೊದಲ ಮಹಿಳಾ ಫೈಟರ್ ಪೈಲಟ್‌ಗಳಾಗಿ ಸೇರ್ಪಡೆಗೊಂಡಿದ್ದರು.