ಕಾಸರಗೋಡು: ಉಪ್ಪಳದ ಮನೆಯಲ್ಲಿ ದಾಸ್ತಾನಿರಿಸಿದ್ದ ಮಾದಕ ದ್ರವ್ಯ ಪೂರೈಕೆಯಾಗಿರುವ ಮೂಲದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ. ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಇದು ಕಾಸರಗೋಡು ಜಿಲ್ಲೆಯ ಇತಿಹಾಸದಲ್ಲೇ ಅತಿ ದೊಡ್ಡ ಮಾದಕ ದ್ರವ್ಯ ದಂಧೆಯಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಷ್ಟು ಶಂಕಿತರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಇತರ ಆರೋಪಿಗಳ ಮಾಹಿತಿ ನೀಡಲು ಸಾಧ್ಯವಾಗದು ಎಂದು ತಿಳಿಸಿದರು.
ಮೇಲ್ಪರಂಬ ಇನ್ಸ್ ಪೆಕ್ಟರ್ ಸಂತೋಷ್ ಮತ್ತು ಮಂಜೇಶ್ವರಂ ಸಬ್ ಇನ್ಸ್ ಪೆಕ್ಟರ್ ನಿಖಿಲ್ ನೇತೃತ್ವದಲ್ಲಿ ಉಪ್ಪಳ ಪತ್ವಾಡಿಯ ಅಸ್ಗರ್‍ಆಲಿ ಎಂಬಾತನ ಮನೆಗೆ ದಾಳಿ ನಡೆಸಿ ಮಾದಕ ದ್ರವ್ಯ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಮನೆಯಲ್ಲಿ ಡ್ರಗ್ಸ್ ದಾಸ್ತಾನಿರಿಸಿರುವ ಬಗ್ಗೆ ರಹಸ್ಯ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ವಿಶೇಷ ತಮಡದ ಸದಸ್ಯರಾದ ನಿಜಿನ್ ಕುಮಾರ್ ಮತ್ತು ರಾಜೀಶ್‍ಕಟ್ಟಂಪಲ್ಲಿ ನೇತೃತ್ವದಲ್ಲಿ ಆರೋಪಿಯ ಮನೆ ಹಾಗೂ ಆಸುಪಾಸಿನ ಚಲನವಲನದ ಬಗ್ಗೆ ನಿಗಾ ಇರಿಸಲಾಗಿತ್ತು. ಅಸ್ಗರ್‍ಆಲಿ ಮನೆಯಿಂದ 3.409 ಕಿಲೋ ಗ್ರಾಂ ಎಂಡಿಎಂಎ, 640 ಗ್ರಾಂ. ಗಾಂಜಾ, 96.96 ಗ್ರಾಂ. ಕೊಕೇನ್, 30ಮಾದಕದ್ರವ್ಯ ಒಳಗೊಂಡ ಕ್ಯಾಪ್ಸೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.