ಕಾಸರಗೋಡು: ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಸರಗೋಡು ವತಿಯಿಂದ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಐದು ದಿವಸಗಳ ಕಾಲ ನಡೆದ 69ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಬುಧವಾರ ರಾತ್ರಿ ಸಂಭ್ರಮದ ಘೋಷಯಾತ್ರೆಯೊಂದಿಗೆ ಸಂಪನ್ನಗೊಂಡಿತು.
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಆರಂಭಗೊಂಡ ವಿಸರ್ಜನಾ ಮೆರವಣಿಗೆ ನಗರದ ವಿವಿಧೆಡೆ ಸಂಚರಿಸಿ ಶ್ರೀ ವೆಂಕಟ್ರಮಣ ದೇವಸ್ಥಾನ ಕೆರೆಯಲ್ಲಿ ಗಣಪತಿ ವಿಗ್ರಹ ವಇಸರ್ಜಿಸಲಾಯಿತು. ಆಕರ್ಷಕ ಸಿಂಗಾರಿ ಮೇಳ, ಹುಲಿ ಕುಣಿತ, ಚೆಂಡೆಮೇಳ, ಸ್ತಬ್ಧ ಚಿತ್ರ, ಭಜನಾ ತಂಡಗಳು ಮೆರವಣಿಗೆಗೆ ಮೆರಗು ನೀಡಿತ್ತು.
ಸೆ. 7ರಂದು ಕೇಳುಗುಡ್ಡೆ ಭಗವಾನ್ ಸಾಯಿನಿಕೇತನ ಅಭಯ ನಿಕೇತನದಿಂದ ಶ್ರೀ ಗಣೇಶ ವಿಗ್ರಹವನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠೆ ನಡೆಸಲಾಗಿದ್ದು, ಐದು ದಿವಸಗಳ ಕಾಲ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.