ಕಾನ್ಪುರ: 'ಹಳಿಯ ಮೇಲೆ ಸಿಲಿಂಡರ್ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ನಮಗೆ ಮಹತ್ವದ ಸುಳಿವೊಂದು ದೊರೆತಿದೆ. ಕೆಲವೇ ದಿನಗಳಲ್ಲಿ ತನಿಖೆ ಪೂರ್ಣಗೊಳಿಸಲಾಗುವುದು' ಎಂದು ಹೆಚ್ಚುವರಿ ಮಹಾನಿರ್ದೇಶಕ (ರೈಲ್ವೆ) ಪ್ರಕಾಶ್ ಡಿ. ಬುಧವಾರ ಮಾಹಿತಿ ನೀಡಿದರು.

'ಘಟನೆ ಸಂಬಂಧ ಸೋಮವಾರ ರಾತ್ರಿ ಸುಮಾರು 24ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು, ಮಂಗಳವಾರ ಬೆಳಿಗ್ಗೆ ಬಿಟ್ಟುಕಳುಹಿಸಲಾಗಿದೆ.
ವಿವಿಧ ಏಜೆನ್ಸಿಗಳು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಘಟನೆಯಲ್ಲಿ ಭಯೋತ್ಪಾದಕರ ಕೈವಾಡವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ, ಹೆಸರು ಹೇಳಲು ಇಚ್ಛಿಸದ ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ಮಾತನಾಡಿ, 'ಘಟನೆಯನ್ನು ಗಮನಿಸಿದರೆ, ಯಾರೋ 'ಅನನುಭವಿ' ವ್ಯಕ್ತಿಯೊಬ್ಬರು, ಇಲಾಖೆಯೊಳಗಿನವರೇ ಕೃತ್ಯ ಎಸಗಿರಬಹುದು' ಎಂದಿದ್ದಾರೆ.