ಮುಳ್ಳೇರಿಯ: ಕೇರಳದ ವಿಶಿಷ್ಟ ಕಲಾಪ್ರಕಾರವಾದ ಕಥಕ್ಕಳಿಯನ್ನು ಉತ್ತೇಜಿಸಲು ಸ್ಪಿಕ್‍ಮೆಕೆ ತಂಡದ ನೇತೃತ್ವದಲ್ಲಿ `ಕುಚೇಲವೃತ್ತಂ' ಕಥಕ್ಕಳಿ ಪ್ರದರ್ಶನ ಮವ್ವಾರು ಎ.ಯು.ಪಿ. ಶಾಲೆಯಲ್ಲಿ ಪ್ರದರ್ಶನಗೊಂಡಿತು.
ಕಲಾಮಂಡಲಂ ಹರಿನಾರಾಯಣನ್ ಅವರು ಆಸನ, ಮುದ್ರೆಗಳು, ಹೆಜ್ಜೆಗಳು, ನವರಸಗಳನ್ನು ವಿವರವಾಗಿ ತಿಳಿಸಿದರು. ವೇದಿಕೆಯಲ್ಲಿ ಭಗವಾನ್ ಶ್ರೀಕೃಷ್ಣ, ಕುಚೇಲ, ಸತ್ಯಭಾಮೆಯ ಪಾತ್ರಗಳ ಅಭಿನಯ ನೋಡಿದ ಮಕ್ಕಳಲ್ಲಿ ಹೊಸ ಉತ್ಸಾಹ ತುಂಬಿತು. ಬೆರಗುಗೊಳಿಸುವ ಅಭಿನಯ ಮಕ್ಕಳಲ್ಲಿ ಹೊಸ ಅನುಭವ ಮೂಡಿಸಿತು. ಕಾರ್ಯಕ್ರಮ ಸಂಯೋಜಕ ರಮೇಶ್ ಬಾಬು ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ವಿಶ್ವನಾಥ ಬಳ್ಳಪದವು ಅಧ್ಯಕ್ಷತೆ ವಹಿಸಿದ್ದರು. ಶೀಜಾ ಪಿ.ವಿ., ಕಲಾಮಂಡಲಂ ಹರಿನಾರಾಯಣನ್, ಎಂಪಿಟಿಎ ಬೀಫಾತಿಮಾ, ಎಸ್‍ಆರ್‍ಜಿ ಸಂಚಾಲಕಿ ವೀಣಾ ಮಾತನಾಡಿದರು.