ಮಂಜೇಶ್ವರ: ಮೂಲಭೂತ ಸೌಕರ್ಯ ಕಲ್ಪಿಸಲಾಗದ ಮಂಜೇಶ್ವರ ಶಾಸಕರ ಕಾರ್ಯವೈಖರಿ ಖಂಡನಿಯ ಮತ್ತು ಸಂಶಯತ್ಮಕ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ.
ಬಿಜೆಪಿ ಸದಸ್ಯತನ ಅಭಿಯಾನ ಮಾಹಿತಿ ಕಾರ್ಯಗಾರ ಉದ್ಘಾಟನೆ ಮಾಡಿ ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಅವರು ಮಾತನಾಡಿದರು.
ಬಿಜೆಪಿ ಸದಸ್ಯತನ ಅಭಿಯಾನ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಇದು ರಾಜಕೀಯದಲ್ಲಿ ದಾಖಲೆ ಸೃಷ್ಟಿಸಲಿದೆ ಎಂದು ಹೇಳಿದರು.
ರಾಜ್ಯಸರ್ಕಾರ ಕೇರಳಕ್ಕೆ ಶಾಪ, ಮಂಜೇಶ್ವರಕ್ಕೆ ಮಂಜೇಶ್ವರದ ಈಗಿನ ಶಾಸಕರೇ ಶಾಪ.ಮಿನಿ ಮಾಸ್ಟ್ ಲೈಟ್ ನ್ನು ತನ್ನ ಸಮುದಾಯದ ಧಾರ್ಮಿಕ ಕೇಂದ್ರ ಗಳ ಮುಂದೆ ಸ್ಥಾಪಿಸುವುದು ಮಾತ್ರ ಇವರ ಕಾಯಕ. ಇದಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯ ಇವರ ಅವಧಿಯಲ್ಲಿ ನಡೆದಿಲ್ಲ ಎಂದು ಆರೋಪಿಸಿದರು.
ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಅಧ್ಯಕ್ಷತೆ ವಹಿಸಿದರರು.ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, sಎಸ್.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಎ.ಕರ.ಕಯ್ಯಾರ್, ಮುಖಂಡರಾದ ಜಯಲಕ್ಷ್ಮಿ ಭಟ್, ಪುಷ್ಪಲಕ್ಷ್ಮಿ, ಯಾದವ ಬಡಾಜೆ, ಶೇಖರ ಕೋಡಿ, ಚಂದ್ರಾವತಿ ಬಾಯಾರ್, ರಾಜ್ ಕುಮಾರ್ ಮೊರತ್ತಣೆ, ಚಂದ್ರಹಾಸ ಪೂಜಾರಿ, ನಿಶಾ ಭಟ್, ಆಶಾ ಪೆಲಪಾಡಿ, ಭಾಸ್ಕರ್ ಪೆÇಯ್ಯೆ, ಮಂಜುನಾಥ್ ಮುಳಿಗದ್ದೆ, ತುಳಸಿ ಕುಮಾರಿ, ನಾರಾಯಣ ತುಂಗಾ, ಮಮತಾ ಪೂಜಾರಿ, ಸುಮಂಗಲ ಪೊಸೋಟ್ ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ. ಭಟ್ ವಂದಿಸಿದರು.