ಕಾಸರಗೋಡು : ಬಿಇಎಂ ಹೈಸ್ಕೂಲ್ ನ 2024 -25 ನೇ ಶೈಕ್ಷಣಿಕ ವರ್ಷದ ಶಾಲಾ ಕ್ರೀಡೋತ್ಸವ ಅಡ್ಕತಬೈಲ್ ತಾಳಿ ಪಡ್ಪು ಮೈದಾನದಲ್ಲಿ ನಡೆಯಿತು. ಶಾಲಾ ವಿದ್ಯಾರ್ಥಿ ನಾಯಕಿಯಾದ ಕುಮಾರಿ ಕಾವೇರಿ ಕ್ರೀಡಾ ಪ್ರತಿಜ್ಞೆ ಹೇಳಿದಳು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರೇಮ್ ಜಿತ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷರಾದ ಶ್ರೀಯುತ ಡಾ.ಕೆ .ಎನ್ ವೆಂಕಟ್ರಮಣ ಹೊಳ್ಳ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡೆಯಿಂದ ವಿದ್ಯಾರ್ಥಿಗಳಿಗಾಗುವಂತಹ ಪ್ರಯೋಜನದ ಕುರಿತು ಮಾತನಾಡಿದರು. ಶಾಲಾ ಅಧ್ಯಾಪಕರಾದ ಯಶವಂತ.ವೈ ಕಾರ್ಯಕ್ರಮದಲ್ಲಿ ಎಲ್ಲರನ್ನೂ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಗಣೇಶ ಅವರ ಧನ್ಯವಾದೊಂದಿಗೆ ಕೊನೆಗೊಂಡಿತು. ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಸಮಾರೋಪ ಸಮಾರಂಭದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.