HEALTH TIPS

ಮದ್ದುಗುಂಡು ಪರವಾನಗಿ: ವಿಜಿಲೆನ್ಸ್ ತಪಾಸಣೆಯಲ್ಲಿ ಅಕ್ರಮಗಳು ಪತ್ತೆ

ತಿರುವನಂತಪುರ: ರಾಜ್ಯದಲ್ಲಿ ಮದ್ದುಗುಂಡು ನಿರ್ವಹಣೆಗೆ ಪರವಾನಗಿ ನೀಡಿಕೆ ಹಾಗೂ ನವೀಕರಣದಲ್ಲಿ ಅವ್ಯವಹಾರ ನಡೆದಿದೆ ಎಂಬ ರಹಸ್ಯ ಮಾಹಿತಿ ಮೇರೆಗೆ ವಿಜಿಲೆನ್ಸ್ ನಡೆಸಿದ ಮಿಂಚಿನ ತಪಾಸಣೆಯಲ್ಲಿ ಅವ್ಯವಹಾರ ಪತ್ತೆಯಾಗಿದೆ.

‘ಆಪರೇxನ್ ವಿಸ್ಫೋಟನ್’ ಹೆಸರಿನಲ್ಲಿ ರಾಜ್ಯಾದ್ಯಂತ ತಪಾಸಣೆ ನಡೆಸಲಾಗಿತ್ತು.

ರಾಜ್ಯದ ಎಲ್ಲಾ 14 ಜಿಲ್ಲೆಗಳಲ್ಲಿ ಮದ್ದುಗುಂಡುಗಳನ್ನು ನಿರ್ವಹಿಸಲು ಪರವಾನಗಿ ನೀಡುವ ಜಿಲ್ಲಾಧಿಕಾರಿಗಳು ಮತ್ತು ಪರವಾನಗಿ ಪಡೆದ ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು.

ಕೇರಳದಲ್ಲಿ ಮದ್ದುಗುಂಡುಗಳನ್ನು ನಿರ್ವಹಿಸಲು ಪರವಾನಗಿಗಾಗಿ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳು ಪರಿಶೀಲಿಸುತ್ತಾರೆ ಮತ್ತು ಆಯಾ ಜಿಲ್ಲಾಧಿಕಾರಿಗಳು 25 ಕೆಜಿಯವರೆಗಿನ ಮದ್ದುಗುಂಡುಗಳನ್ನು ನಿರ್ವಹಿಸಲು ಎಲ್.ಇ.ಎಸ್. ಪರವಾನಗಿಯನ್ನು ನೀಡುತ್ತಾರೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕೊಚ್ಚಿಯಲ್ಲಿರುವ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ (ಪಿ.ಇ.ಎಸ್.ಸಿ.ಒ) ಉಪ ವೃತ್ತ ಕಚೇರಿಯಿಂದ 25 ಕೆಜಿಗಿಂತ ಹೆಚ್ಚಿನ ಎಲ್.ಇ.  1 ಪರವಾನಗಿಯನ್ನು ನೀಡಲಾಗುತ್ತದೆ ಮತ್ತು 500 ಕೆ.ಜಿ. ಗಿಂತ ಹೆಚ್ಚಿನ ಎಲ್.ಇ.3 ಪರವಾನಗಿಯನ್ನು ಚೆನ್ನೈನಲ್ಲಿರುವ ಪಿ.ಇ.ಎಸ್.ಸಿ.ಒ ವಲಯ ಕಚೇರಿಯಿಂದ ನೀಡಲಾಗುತ್ತದೆ. .

ಅಲಪ್ಪುಳ ಕಲೆಕ್ಟರೇಟ್‍ನಲ್ಲಿ ನಡೆಸಿದ ಮಿಂಚಿನ ತಪಾಸಣೆಯಲ್ಲಿ, ಕೆಲವು ಪರವಾನಗಿ ಅರ್ಜಿಗಳಲ್ಲಿ ಸಲ್ಲಿಸಲಾದ ದಾಖಲೆಗಳು ಮತ್ತು ಪರಿಶೀಲನಾ ವರದಿಗಳಲ್ಲಿನ ಕಟ್ಟಡದ ಸಂಖ್ಯೆಗಳ ನಡುವೆ ವ್ಯತ್ಯಾಸ ಕಂಡುಬಂದಿದೆ. ಇನ್ನೊಂದು ಅರ್ಜಿಯಲ್ಲಿ ಕಟ್ಟಡ ತೆರಿಗೆ ರಶೀದಿ, ತಹಸೀಲ್ದಾರ್ ವರದಿ ಹಾಗೂ ಅಗ್ನಿಶಾಮಕ ದಳದ ವರದಿಯಲ್ಲಿ ಪ್ರತ್ಯೇಕ ಕಟ್ಟಡ ಸಂಖ್ಯೆ ದಾಖಲಾಗಿರುವುದು ವಿಜಿಲೆನ್ಸ್ ಗೆ ಪತ್ತೆಯಾಗಿದೆ.

ಪಾಲಕ್ಕಾಡ್ ಜಿಲ್ಲೆಯಲ್ಲಿ 2022ರ ಜೂನ್ ತಿಂಗಳಿನಲ್ಲಿ ಮರಣ ಹೊಂದಿದ ಪರವಾನಗಿದಾರರ ಪರವಾನಗಿಯನ್ನು ಇದುವರೆಗೆ ರದ್ದುಗೊಳಿಸಲಾಗಿಲ್ಲ, ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಜಿಲ್ಲಾ ಪೋಲೀಸ್ ಮುಖ್ಯಸ್ಥರ ವರದಿಯನ್ನು ಪರಿಗಣಿಸದೆ ಮದ್ದುಗುಂಡುಗಳನ್ನು ನಿರ್ವಹಿಸಲು ಪರವಾನಗಿ ನೀಡಲಾಗಿದೆ. ಪೋಲೀಸರ ವರದಿಯನ್ನು ಪರಿಗಣಿಸದೆ ಕೊಟ್ಟಾಯಂ ಜಿಲ್ಲೆಯ ಚಂಗನಾಶ್ಶೇರಿಯಲ್ಲಿ ಲೈಸೆನ್ಸ್ ನವೀಕರಣ ಮಾಡಿರುವುದು ಪತ್ತೆಯಾಗಿದೆ.

ರಾಜ್ಯಾದ್ಯಂತ ನಡೆಸಿದ ಪರಿಶೀಲನೆಯಲ್ಲಿ ವಿವಿಧ ಕಲೆಕ್ಟರೇಟ್‍ಗಳಲ್ಲಿ ಮದ್ದುಗುಂಡುಗಳ ವಿತರಣೆ ಮತ್ತು ನವೀಕರಣಕ್ಕಾಗಿ ಸಲ್ಲಿಸಿದ ಅರ್ಜಿಗಳ ಪೈಕಿ 822 ಅರ್ಜಿಗಳು ಬಾಕಿ ಉಳಿದಿರುವುದು ಕಂಡುಬಂದಿದೆ. ಈ ಪೈಕಿ ಕೋಝಿಕ್ಕೋಡ್ 345, ಎರ್ನಾಕುಳಂ 185, ಮಲಪ್ಪುರಂ 74, ಪಾಲಕ್ಕಾಡ್ 48, ಕಣ್ಣೂರು 40, ತಿರುವನಂತಪುರಂ 31, ಕಾಸರಗೋಡು ಮತ್ತು ತ್ರಿಶೂರ್ ತಲಾ 28, ಆಲಪ್ಪುಳ 16, ಕೊಲ್ಲಂ 15, ಕೊಟ್ಟಾಯಂ 5, ವಯನಾಡ್ 4 ಮತ್ತು ಪತ್ತನಂತಿಟ್ಟ 3 ಎಂಬಂತೆ ಅರ್ಜಿಗಳ ತೀರ್ಪು ನೀಡಲು ಬಾಕಿಯಿರಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries