ಕಲ್ಪಟ್ಟ: ಕೇರಳ ರಾಜ್ಯ ಅಲ್ಪಸಂಖ್ಯಾತ ಆಯೋಗ ಹಾಗೂ ಕೇರಳ ಜ್ಞಾನ ಆರ್ಥಿಕ ಮಿಷನ್ ಜಂಟಿಯಾಗಿ ಆಯೋಜಿಸುವ ‘ಅಲ್ಪಸಂಖ್ಯಾತ ಯುವಕರಿಗೆ ಒಂದು ಲಕ್ಷ ಉದ್ಯೋಗಾವಕಾಶ’ ಯೋಜನೆಯ ರಾಜ್ಯಮಟ್ಟದ ಉದ್ಘಾಟನೆ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಕ್ರೀಡಾ ಸಚಿವ ವಿ.ಅಬ್ದುಲ್ ರಹಮಾನ್ ಅವರು ಇಂದು ಕಲ್ಪಟ್ಟಾದÀಲ್ಲಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಒ.ಆರ್.ಕೇಳು ಭಾಗವಹಿಸುವರು. ಆಯೋಗದ ಅಧ್ಯಕ್ಷ ಅಡ್ವ. ಎ.ಎ.ರಶೀದ್ ಅಧ್ಯಕ್ಷತೆ ವಹಿಸುವರು.
ಕೇರಳ ನಾಲೆಡ್ಜ್ ಎಕಾನಮಿ ಮಿಷನ್ ಪ್ರಾದೇಶಿಕ ಪ್ರಾಜೆಕ್ಟ್ ಮ್ಯಾನೇಜರ್ ಡಯಾನಾ ತಂಗಚನ್ ಯೋಜನೆಯ ಪ್ರಸ್ತುತಿ ಮಾಡಲಿದ್ದಾರೆ. 18 ರಿಂದ 50 ವರ್ಷದೊಳಗಿನ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾವಂತರಿಗೆ ಸರ್ಕಾರೇತರ ವಲಯಗಳಲ್ಲಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ವ್ಯಾಪಕ ಉದ್ಯೋಗ ನೋಂದಣಿ ಶಿಬಿರ ನಡೆಸಲಾಗುತ್ತಿದೆ. ಪ್ಲಸ್ 2 ಪಾಸಾದ ಅಲ್ಪಸಂಖ್ಯಾತರ ಗುಂಪುಗಳಿಗೆ ಸೇರಿದವರು ಶಿಬಿರಕ್ಕೆ ಬಂದು ನೋಂದಣಿ ಮಾಡಿಕೊಳ್ಳಬಹುದು. ಬೆಳಗ್ಗೆ 8.30ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.