ಕೊಟ್ಟಾಯಂ: ದೇವಸ್ಥಾನಗಳ ವಿಧಿವಿಧಾನಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ತಂತ್ರಿಗಳಿಗೆ ಇದೆ ಎಂದು ದೇವಸ್ವಂ ಸಚಿವ ವಿ.ಎನ್. ವಾಸವನ್ ತಿಳಿಸಿರುವರು.
ತಂತ್ರಿಗಳ ಸೂಚನೆಯನ್ನು ಸ್ವೀಕರಿಸಿದ ನಂತರವೇ ದೇವಾಲಯದ ಆಚರಣೆಗಳನ್ನು ಮುಂದುವರಿಸುವುದು ಸರ್ಕಾರದ ನೀತಿಯಾಗಿದೆ ಎಂದು ಅವರು ಸಷ್ಟ್ಪಪಡಿಸಿದರು. ಅವರು ಕೊಟ್ಟಾಯಂ ಕುಮಾರನೆಲ್ಲೂರಿನಲ್ಲಿ ಅಖಿಲ ಕೇರಳ ತಂತ್ರಿ ಸಮಾಜಂ ದಕ್ಷಿಣ ಪ್ರಾದೇಶಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತಂತ್ರಿಗಳ ಅಧಿಕಾರವನ್ನು ಆ ಕಾಲದ ಸ್ಥಳೀಯ ಆಡಳಿತಗಾರರಿಂದ ನಿರ್ಧರಿಸಲಾಗಲಿಲ್ಲ. ಮಲಬಾರ್ ದೇವಸ್ವಂ ಮಂಡಳಿ ಆಯುಕ್ತರು ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ ಕೆಲವು ವ್ಯತಿರಿಕ್ತ ಹೇಳಿಕೆಗಳನ್ನು ಸೇರಿಸಿರುವ ಬಗ್ಗೆ ದೇವಸ್ವಂ ಇಲಾಖೆ ಗಂಭೀರವಾಗಿ ಗಮನಿಸಿದೆ ಎಂದು ಸಚಿವರು ಹೇಳಿದರು.
ದಕ್ಷಿಣ ಪ್ರಾಂತ ಅಧ್ಯಕ್ಷ ಸುರೇಶ ಭಟ್ಟತ್ತಿರಿ ಅಧ್ಯಕ್ಷತೆ ವಹಿಸಿದ್ದರು. ತಿರುವಾಂಕೂರು ದೇವಸ್ವಂ ಮಂಡಳಿ ಸದಸ್ಯ ಅಡ್ವ. ಎ. ಅಜಿ ಕುಮಾರ್ ಸ್ವಾಗತಿಸಿದರು.ಸಮಾಜದ ಪ್ರಧಾನ ಕಾರ್ಯದರ್ಶಿ ಪುದಯೂರು ಜಯನಾರಾಯಣನ್ ನಂಬೂದಿರಿಪಾಡ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಮಾರನಲ್ಲೂರು ದೇವಸ್ವಂ ವ್ಯವಸ್ಥಾಪಕ ಮುರಳಿ ಕಂಜಿರಕಟ್, ಸಮಾಜಂ ಕೇಂದ್ರ ಪ್ರಾಂತ ಅಧ್ಯಕ್ಷ ಸಿ.ಪಿ. ನಾರಾಯಣನ್ ನಂಬೂದಿರಿಪಾಡ್, ಕೇಂದ್ರ ಉಪಾಧ್ಯಕ್ಷ ಎ.ಎ. ಭಟ್ಟತ್ತಿರಿಪಾಡ್ ಪ್ರಾದೇಶಿಕ ಕಾರ್ಯದರ್ಶಿ ಗೋಕುಲಂ ಶಂಭು ಪೋತ್ತಿ, ಕತಿಯಾಕೋಲ್ ಡಾ. ಶ್ರೀಕಾಂತ್ ನಾರಾಯಣನ್ ನಂಬೂದಿರಿ ಮಾತನಾಡಿದರು.