ಕಾಸರಗೋಡು: ನಗರದ ವಿವಿಧ ವ್ಯಾಪಾರಿ ಸಂಸ್ಥೆಗಳಲ್ಲಿ ನಡೆದ ಸರಣಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಜ್ಯ ಕಳವು ತಂಡದ ಸದಸ್ಯನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ಮಾಯಸಂದ್ರ ಡಿ.ಬಿ ನಗರ ನಿವಾಸಿ ಪ್ರೇಮ್‍ಕುಮಾರ್ ಅಲಿಯಾಸ್ ಜಾನಿ(24)ಬಂಧಿತ. ನಗರಠಾಣೆ ಇನ್ಸ್‍ಪೆಕ್ಟರ್ ನಳಿನಾಕ್ಷನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಬಂಧಿತ ಆರೋಪಿ ಕಾಸರಗೋಡು ಅಲ್ಲದೆ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ನಡೆದಿರುವ ವಿವಿಧ ಕಳವು ಪ್ರಕರಣಗಳಲ್ಲಿ ಶಾಮೀಲಾಗಿದ್ದಾನೆ. 2024 ಮಾ. 29ರಂದು ಬೆಳಗ್ಗೆ ಕಾಸರಗೋಡು ಕರಂದಕ್ಕಾಡಿನ ಸಿಟಿ ಕೂಲ್ ಇಲೆಕ್ಟ್ರಾನಿಕ್ ಅಂಗಡಿ, ರೈಲ್ವೆ ನಿಲ್ದಾಣ ವಠಾರದ ಹೈಪರ್ ಮಾರ್ಕೆಟ್‍ನಲ್ಲಿ ನಡೆದಿರುವ ಕಳವಿನಲ್ಲಿ ಆರೋಪಿಯಾಗಿರುವುದಾ ಪೊಲೀಸರು ತಿಳಿಸಿದ್ದಾರೆ. ಇಲೆಕ್ಟ್ರಾನಿಕ್ ಅಂಗಡಿಯಿಂದ 40ಸಾವಿರ ರೂ. ನಗದು ಹಾಗೂ 10ಸಾವಿರ ರೂ.ಮೌಲ್ಯದ ಮಿಕ್ಸಿ, ಹೈಪರ್‍ಮಾರ್ಕೆಟ್‍ನಿಂದ 55ಸಾವಿರ ರೂ. ನಗದು ಕಳವು ನಡೆಸಲಾಗಿತ್ತು. ಅಲ್ಲದೆ ಅಶ್ವಿನಿ ನಗರದ ಬಟ್ಟೆ ಅಂಗಡಿಯೊಂದರಿಂದ ಅಂದು ಕಳವಿಗೆ ಯತ್ನಿಸಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.