ಕಾಸರಗೋಡು: ಮೊಗ್ರಾಲ್ ಸನಿಹದ ಪೇರಾಲ್ ನಿವಾಸಿ, ದೈವನರ್ತನ ಕಲಾವಿದ ಶ್ರೀಧರ(51)ನಾಪತ್ತೆಯಾಗಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೆ. 11ರಂದು ಮನೆಯಿಂದ ಹೊರಟವರು ವಾಪಸಾಗಿಲ್ಲ ಎಂದು ದುರಿನಲ್ಲಿ ತಿಳಿಸಲಾಗಿದೆ. ಶ್ರೀಧರ ಅವರ ಕುಟುಂಬ ಮೊಗ್ರಾಲಿನ ತರವಾಡು ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.