ಬದಿಯಡ್ಕ: ಕೇರಳದಲ್ಲಿ ಕೆಲವು ದಿನಗಳ ಹಿಂದೆ ನಡೆದ ಓಣಂ ಪೂರ್ವ ಪರೀಕ್ಷೆಯ ಪ್ರಶ್ನೆಪತ್ರಿಕೆಯೊಂದರಲ್ಲಿ ಏಕೈಕ ಸಂಸ್ಕøತ ವಾರಪತ್ರಿಕೆ ‘ಸುಧರ್ಮ’ ಉಲ್ಲೇಖಗೊಂಡು ಗಮನ ಸೆಳೆದಿದೆ.
ಹಿರಿಯ ಪ್ರಾಥಮಿಕದ 6ನೇ ತರಗತಿಗೆ ಸೋಮವಾರ ನಡೆದ ಸಂಸ್ಕøತ ಪರೀಕ್ಷೆ ಪ್ರಶ್ನೆಪತ್ರಿಕೆಯ ಮೊದಲ ಪುಟದಲ್ಲಿ ಪ್ರಥಮ ಪ್ರಶ್ನೆಯ ಭಾಗವಾಗಿ ಸುಧರ್ಮದ ಶೀರ್ಷಿಕೆ ಪುಟದ ಚಿತ್ರದೊಂದಿಗೆ ಲೋಕಕಫ್ ಕ್ರಿಕೆಟ್ ನ ಪ್ರಶ್ನೆಗಳನ್ನು ಉಲ್ಲೇಖಿಸಲಾಗಿದೆ. ಸುಧರ್ಮ ಪತ್ರಿಕೆಯಲ್ಲಿ ಬಂದ ವರದಿಯನ್ನು ಇಲ್ಲಿ ಬಳಸಿದ್ದು, ಐದು ಅಂಕಗಳ ಪ್ರಶ್ನೆಗಳನ್ನು ಕೇಳಲಾಗಿತ್ತು.
ಸುಧರ್ಮ ವಾರಪತ್ರಿಕೆ ಭಾರತದಲ್ಲಿ ನಿಯಮಿತವಾಗಿ ಪ್ರಕಟಗೊಳ್ಳುತ್ತಿರುವ ಏಕೈಕ ಸಂಸ್ಕøತ ಪತ್ರಿಕೆಯಾಗಿದ್ದು, ಮೈಸೂರಿನಿಂದ ಪ್ರಕಟಗೊಳ್ಳುತ್ತಿದೆ.