ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಮುಂದಿನ ವಾರ ಕ್ವಾಡ್ ರಾಷ್ಟ್ರಗಳ ಶೃಂಗಸಭೆಯನ್ನು ಆಯೋಜಿಸಿದ್ದಾರೆ. ಸಭೆಯಲ್ಲಿ ಆಸ್ಟ್ರೇಲಿಯಾ, ಭಾರತ ಹಾಗೂ ಜಪಾನ್‌ನ ಪ್ರಧಾನಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷರ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಈ ವರ್ಷ ನಡೆಯಬೇಕಿದ್ದ 'ಕ್ವಾಡ್' ಶೃಂಗಸಭೆಯನ್ನು ಭಾರತವು ಮುಂದಿನ ವರ್ಷ ಆಯೋಜಿಸಿದೆ. ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಲು ಕೆಲವೇ ತಿಂಗಳು ಬಾಕಿ ಉಳಿದಿರುವಂತೆಯೇ, ಜೋ ಬೈಡನ್ ಅವರು ಕ್ವಾಡ್ ಶೃಂಗಸಭೆ ಆಯೋಜಿಸುವ ಮೂಲಕ ಮಹತ್ವದ ವಿದೇಶಾಂಗ ನೀತಿಯ ಪರಂಪರೆಯನ್ನು ಮುಂದುವರಿಸುವ ಪ‍್ರಯತ್ನ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
'ಸೆ. 21ರಂದು ಕ್ವಾಡ್ ಶೃಂಗಸಭೆ ಶುರುವಾಗಲಿದ್ದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್, ಭಾರತದ ಪ‍್ರಧಾನಿ ನರೇಂದ್ರ ಮೋದಿ, ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಶಿಡಾ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದಾರೆ' ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೈನ್ ಜಿನ್ ಪಿಯಾರೆ ತಿಳಿಸಿದ್ದಾರೆ.
'ಕ್ವಾಡ್' ರಾಜತಾಂತ್ರಿಕ ಸಹಭಾಗಿತ್ವದ ಒಕ್ಕೂಟವಾಗಿದ್ದು, ಅಮೆರಿಕ, ಭಾರತ, ಆಸ್ಟ್ರೇಲಿಯಾ ಹಾಗೂ ಜಪಾನ್ ಸದಸ್ಯ ರಾಷ್ಟ್ರಗಳಾಗಿವೆ.