ತಿರುವನಂತಪುರಂ: ರಾಜ್ಯದಲ್ಲಿ ಓಣಂ ಸಂದರ್ಭದಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆಯಾಗಿ ಅಚ್ಚರಿಮೂಡಿಸಿದೆ. ಅಂದಾಜಿನ ಪ್ರಕಾರ ಉತ್ರಾಡಂಗೆ ಮುನ್ನ ಒಂಬತ್ತು ದಿನಗಳಲ್ಲಿ ಕೇವಲ 701 ಕೋಟಿ ಮಾರಾಟವಾಗಿದೆ.
ಕಳೆದ ವರ್ಷ ಈ ದಿನಗಳಲ್ಲಿ 715 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 14 ಕೋಟಿ ರೂಪಾಯಿ ಮಾರಾಟ ಇಳಿಕೆಯಾಗಿದೆ.
ಇದೇ ವೇಳೆ, ಉತ್ರಾಡಂ ದಿನದಂದು ರಾಜ್ಯದಲ್ಲಿ 4 ಕೋಟಿ ಮದ್ಯ ಮಾರಾಟದಲ್ಲಿ ಹೆಚ್ಚಳವಾಗಿದೆ. ಉತ್ರಾಡಂ ದಿನ 124 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇಂದು ಬೆವ್ಕೊಗೆ ರಜೆ ಇರುವುದರಿಂದ ನಾಳೆ ಮತ್ತು ಬುಧವಾರ ಮದ್ಯ ಮಾರಾಟವನ್ನು ಸೇರಿಸಿ ಅಂತಿಮ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ.