ಕಾಸರಗೋಡು: ವಿವಿಧ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪ್ರದರ್ಶಿಸಿದ ಮಹಿಳೆಯರನ್ನು ಗೌರವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡುವ 'ವನಿತಾ ರತ್ನ ಪ್ರಶಸ್ತಿ'ಗೆ ಅರ್ಜಿ ಆಹ್ವಾನಿಸಲಾಗಿದೆ. ಸಮಾಜ ಸೇವೆ, ಕ್ರೀಡೆ, ಪ್ರತಿಕೂಲ ಸನ್ನಿವೇಶ ಎದುರಿಸಿ ಜೀವನದಲ್ಲಿ ಯಶಸ್ಸು ಸಾಧಿಸಿದ ಮಹಿಳೆಯರು, ಮಹಿಳಾ ಮತ್ತು ಮಕ್ಕಳ ಸಬಲೀಕರಣ, ಶಿಕ್ಷಣ-ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೈಯಕ್ತಿಕ ಛಾಪು ಮೂಡಿಸಿದ ಮಹಿಳೆಯರು ಮತ್ತು ಕಲಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಮಹಿಳೆಯರಿಗೆ ಅರ್ಜಿ ಸಲ್ಲಿಸಬಹುದು.
ಪ್ರಶಸ್ತಿಗೆ ನಾಮನಿರ್ದೇಶನಗೊಂಡ ವ್ಯಕ್ತಿ ಜೀವಂತ ವ್ಯಕ್ತಿಯಾಗಿದ್ದು, ಕನಿಷ್ಠ ಕಳೆದ ಐದು ವರ್ಷಗಳಿಂದ ಸಂಬಂಧಪಟ್ಟ ಕ್ಷೇತ್ರದಲ್ಲಿ ಕೆಲಸ ಮಾಡಿರಬೇಕು. ಪ್ರಶಸ್ತಿಗೆ ಅಂತಿಮ ದಿನಾಂಕದ ನಂತರ ನಾಮನಿರ್ದೇಶನಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು ಅಕ್ಟೋಬರ್ 10 ರೊಳಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಛೇರಿಯಲ್ಲಿ ಲಭ್ಯವಾಗುವಂತೆ ಕಳುಹಿಸಬೇಕು. ವ್ಯಕ್ತಿಗಳು, ಸಂಘಟನೆಗಳು ಮತ್ತು ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡಬಹುದಾಗಿದೆ. ಕಾಸರಗೋಡು ಸಿವಿಲ್ ಸ್ಟೇಶನ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಅಥವಾ ತಿಛಿಜ.ಞeಡಿಚಿಟಚಿ.gov.iಟಿ sh_v ಸೈಟ್‍ನಿಂದ ಅರ್ಜಿ ನಮೂನೆ ಮತ್ತು ಮಾಹಿತಿ ಲಭ್ಯವಿರಲಿದೆ. ಲೀ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994293060)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.