ಕೋಝಿಕ್ಕೋಡ್: ಮನೆಯ ಬಾವಿಯಲ್ಲಿ ತಾಯಿ ಮತ್ತು ಮಗು ಶವವಾಗಿ ಪತ್ತೆಯಾಗಿದ್ದಾರೆ. ವರ್ಷಗಳ ಕಾಯುವಿಕೆಯ ನಂತರ ಜನಿಸಿದ ತನ್ನ ಮಗುವಿನೊಂದಿಗೆ ಯುವತಿ ಆತ್ಮಹತ್ಯೆಗೈದಿದ್ದಾಳೆ.
ಪೆರಂಬ್ರಾ ಅಂಚಾಂಪೀಡಿಕ ಇಲ್ಲತುಮ್ಮಿತಾಲ್ ಕುಟ್ಟಿಕೃಷ್ಣ ಅವರ ಪುತ್ರಿ ಗ್ರೀಷ್ಮಾ ಹಾಗೂ ಮೂರು ತಿಂಗಳ ಪುತ್ರಿ ಅಶ್ವಿ ಮೃತ ದುರ್ದೈವಿಗಳು. ನಿನ್ನೆ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಕುಟುಂಬಸ್ಥರ ಗಲಾಟೆ ಕೇಳಿ ಓಡಿ ಬಂದ ಸ್ಥಳೀಯರು ಪೆರಂಬ್ರಾ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಬಂದು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಗ್ರೀಷ್ಮಾ ತನ್ನ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಗ್ರೀಷ್ಮಾ ಮತ್ತು ಮುಚುಕುನ್ ಮೂಲದ ಮನೋಲಿ ಲಿನಿಶ್ ನಡುವಿನ ವಿವಾಹವು 13 ಸೆಪ್ಟೆಂಬರ್ 2013 ರಂದು ನಡೆದಿತ್ತು.
ಹಲವು ವರ್ಷಗಳ ನಂತರ ದಂಪತಿಗೆ ಒಂದು ಮಗು ಜನಿಸಿತ್ತು. ಮೂರು ದಿನಗಳ ನಂತರ ಗಂಡನ ಮನೆಗೆ ಹೋಗಲಿರುವಾಗಲೇ ಈ ದಾರುಣ ಘಟನೆ ನಡೆದಿದೆ. ಪೇರಂಬ್ರಾ ಪೆÇಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಇಂದು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.