ಭಕ್ಷ್ಯ ಪದಾರ್ಥ ಬೇಯಿಸಿದ ಪಾತ್ರೆಗಳನ್ನು ತೊಳೆಯಲು ಹೆಚ್ಚಿನ ಮನೆಯ ಅಡುಗೆಮನೆಗಳಲ್ಲಿ ಸ್ಪಾಂಜ್ ಸ್ಕ್ರಬ್ಬರ್ ಅನ್ನು ಬಳಸಲಾಗುತ್ತದೆ. ಈ ಸ್ಕ್ರಬ್ಬರ್‍ಗಳನ್ನು ಸಾಮಾನ್ಯವಾಗಿ ತಿಂಗಳ ಬಳಕೆಯ ನಂತರವೂ ಬದಲಾಯಿಸಲಾಗುವುದಿಲ್ಲ, ಒಂದು ಸೋಪ್ ಖಾಲಿಯಾಗಿ ಹೊಸ ಸೋಪ್ ಬಂದರೂ ಸ್ಕ್ರಬ್ಬರ್ ಬದಲಾಯಿಸುವ ಗೋಜಿಗೇ ಹೋಗುವುದಿಲ್ಲ.
ಆದರೆ ಹೀಗೆ ಮಾಡುವುದರಿಂದ ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನು ತಿಳಿಯಿರಿ..
ಮನೆಯಲ್ಲಿನ ಟಾಯ್ಲೆಟ್ ಸೀಟ್‍ಗಳಿಗಿಂತ ಸ್ಪಾಂಜ್ ಸ್ಕ್ರಬ್ಬರ್‍ಗಳು ಕೊಳಕು ಎಂದು ಪೌಷ್ಟಿಕತಜ್ಞ ಅನನ್ಯಾ ಹೇಳುತ್ತಾರೆ. ತಿಂಗಳುಗಟ್ಟಲೆ ಬಳಕೆಯಲ್ಲಿರುವ ಸ್ಪಂಜುಗಳು ದೊಡ್ಡ ಪ್ರಮಾಣದಲ್ಲಿ ಇ-ಕೋಲಿ ಬ್ಯಾಕ್ಟೀರಿಯಾವನ್ನು ಬೆಳೆಸುತ್ತವೆ. ಪಾತ್ರೆಗಳನ್ನು ತೊಳೆಯಲು ನಾವು ಅದೇ ಸ್ಕ್ರಬ್ಬರ್‍ಗಳನ್ನು ಪದೇ ಪದೇ ಬಳಸಿದಾಗ, ಬ್ಯಾಕ್ಟೀರಿಯಾಗಳು ಪ್ರತಿದಿನ ನಮ್ಮ ದೇಹವನ್ನು ಪ್ರವೇಶಿಸಿ ರೋಗಗಳಿಗೆ ಕಾರಣವಾಗುತ್ತವೆ.
ಪ್ರತಿ ಎರಡು ವಾರಗಳಿಗೊಮ್ಮೆ ಸ್ಪಾಂಜ್ ಸ್ಕ್ರಬ್ಬರ್‍ಗಳನ್ನು ಬದಲಾಯಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಡಿಶ್ ವಾಶ್‍ನೊಂದಿಗೆ ಸ್ಕ್ರಬ್ಬರ್‍ಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಅವುಗಳನ್ನು ಸ್ವಲ್ಪ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿ. ನಂತರ ಅದನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಹೀಗೆ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಬ್ಯಾಕ್ಟೀರಿಯಾಗಳು ದೂರವಾಗಲು ನೆರವಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.