ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಭಾನುವಾರ ಪೀಠ ಪ್ರತಿμÁ್ಠ ದಿನ ಮತ್ತು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಸಂನ್ಯಾಸಾಶ್ರಮ ಸ್ವೀಕಾರದ 22 ನೇ ವಾರ್ಷಿಕ ದಿನ ಕಾರ್ಯಕ್ರಮಗಳು ಶ್ರೀವಿಷ್ಣು ಸಹಸ್ರನಾಮ ಹವನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನಗೈದು ಕಳೆದ 22 ವರ್ಷಗಳಿಂದ ತಮ್ಮೊಂದಿಗಿದ್ದು ಇಲ್ಲಿನ ಎಲ್ಲಾ ಚಟುವಟಿಕೆಗಳಿಗೆ ಬೆಂಬಲಿಸಿ ಮಠವನ್ನು ಬೆಳೆಸಿದವರೆಲ್ಲರನ್ನು ಶ್ಲಾಘಿಸಿದರು, ದಣಿವರಿಯದೆ ಶ್ರಮಿಸಿದ ಕಾರ್ಯಕರ್ತರ ಕೊಡುಗೆಯನ್ನು ಸ್ಮರಿಸಿಕೊಂಡರು. ಕೊಡುಗೈದಾನಿ ಶ್ರೀಮಂತ ಹೃದಯಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ಮತ್ತು ರಾಜ್ಯಸಭಾ ಸದಸ್ಯ ಕೆ. ನಾರಾಯಣ ಸ್ಪಾನ್ ಪ್ರಿಂಟ್ ಬೆಂಗಳೂರು ಅವರು ಶ್ರೀ ಮಠದ ಶಿಸ್ತುಬದ್ದ ಧಾರ್ಮಿಕ ಸಾಮಾಜಿಕ ಚಟುವಟಿಕೆಗಳನ್ನು ಹೃತ್ಪೂರ್ವಕವಾಗಿ ಕೊಂಡಾಡಿದರು.
ಸಭೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಭೂದಾನ ನೀಡಿದ ಕಿರಣ್ ಕುಮಾರ್ ಭಂಡಾರಿ, ಮಾಜಿ ಎಂ.ಎಲ್.ಸಿ ಮೋನಪ್ಪ ಭಂಡಾರಿ, ಶಶಿಧರ ಶೆಟ್ಟಿ ಗ್ರಾಮಚಾವಡಿ, ಮಸ್ಕತ್‍ನ ವಿಶ್ವನಾಥನ್ ವೆಂಗರೆ, ಮಂಗಳೂರಿನ ಉದ್ಯಮಿ ಎ.ಜೆ ಶೇಖರ್ ಅತಿಥಿಗಳಾಗಿ ಪಾಲ್ಗೊಂಡು ಶುಭs ಹಾರೈಸಿದರು.
ಇದೇ ಸಂದರ್ಭದಲ್ಲಿ ಆಶ್ರಮದ "ಆಶ್ರಯ" ಯೋಜನೆಯಡಿಯಲ್ಲಿ ಸ್ವಂತ ಭೂಮಿ ಇಲ್ಲದ ಹತ್ತು ಬಡ ಕುಟುಂಬಗಳಿಗೆ ಭೂದಾನವನ್ನು ನೀಡಲಾಯಿತು. ಮಂಗಳೂರು ಕರಂಗಲ್ಪಾಡಿಯ ಕಿರಣ್ ಭಂಡಾರಿಯವರು ತಮ್ಮ ಉದಾರ ಕೊಡುಗೆಯಾಗಿ 1 ಎಕರೆ 19 ಸೆಂಟ್ಸ್ ಭೂಮಿಯ ಹಕ್ಕು ಪತ್ರವನ್ನು ಸ್ವಾಮೀಜಿಯವರಿಗೆ ಹಸ್ತಂತರಿಸಿದರು. ಕಿರಣ್ ಭಂಡಾರಿ ದಂಪತಿಗಳನ್ನು ಅವರ ಸೇವೆಗಾಗಿ ಸನ್ಮಾನಿಸಲಾಯಿತು. ದರ್ಭೆತಡ್ಕದ ಶಂಕರ ವೇದ ವಿದ್ಯಾ ಗುರುಕುಲದ ವಿದ್ಯಾರ್ಥಿಗಳಿಂದ ವೇದಘೋಷದೊಂದಿಗೆ ಆರಂಭಗೊಂಡ ಸಭೆಯಲ್ಲಿ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಮೋನಪ್ಪ ಭಂಡಾರಿ ವಂದಿಸಿದರು. ದಿನಕರ ಹೊಸಂಗಡಿ ಹಾಗೂ ಅಶೋಕ್ ಬಾಡೂರು ಕಾರ್ಯಕ್ರಮ ನಿರೂಪಿಸಿದರು.