ಗೋರಖ್ಪುರ: 'ಗ್ಯಾನವಾಪಿಯು ವಾಸ್ತವವಾಗಿ ಭಗವಾನ್ ಶಿವ. ಆದರೆ ದುರದೃಷ್ಟವಶಾತ್ ಜನರು ಅದನ್ನು ಮಸೀದಿ ಎಂದು ಕರೆಯುತ್ತಾರೆ' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಗೋರಖ್ಪುರ: 'ಗ್ಯಾನವಾಪಿಯು ವಾಸ್ತವವಾಗಿ ಭಗವಾನ್ ಶಿವ. ಆದರೆ ದುರದೃಷ್ಟವಶಾತ್ ಜನರು ಅದನ್ನು ಮಸೀದಿ ಎಂದು ಕರೆಯುತ್ತಾರೆ' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಗೋರಖ್ಪುರದಲ್ಲಿ ಶನಿವಾರ 'ನಾಥ ಪಂಥ'ದ ಕುರಿತು ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಆದಿ ಶಂಕರಾಚಾರ್ಯ ಅವರಿಗೆ ಸಂಬಂಧಿಸಿದ ಕಥೆಯನ್ನು ವಿವರಿಸುತ್ತಾ ಈ ಮಾತುಗಳನ್ನಾಡಿದ್ದಾರೆ.
ಗ್ಯಾನವಾಪಿ ಮಸೀದಿಯ ತೆಹಖಾನಾದ ಚಾವಣಿಯ ಮೇಲೆ ಮುಸ್ಲಿಮರು ನಮಾಜ್ ಮಾಡುವುದನ್ನು ತಡೆಯಬೇಕು ಎಂದು ಕೋರಿ ಹಿಂದೂಗಳು ಸಲ್ಲಿಸಿದ್ದ ಅರ್ಜಿಯನ್ನು ವಾರಾಣಸಿಯ ನ್ಯಾಯಾಲಯವೊಂದು ಶುಕ್ರವಾರ ವಜಾಗೊಳಿಸಿತ್ತು. ಅದರ ಬೆನ್ನಲ್ಲೇ, ಯೋಗಿ ಈ ಹೇಳಿಕೆ ನೀಡಿದ್ದಾರೆ.
ಗ್ಯಾನವಾಪಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಹಿಂದೂ ಅರ್ಜಿದಾರರ ಪರವಾಗಿ ಮಾತನಾಡಿದ್ದ ಅವರು, 'ಐತಿಹಾಸಿಕ ತಪ್ಪನ್ನು ಮುಸ್ಲಿಮರು ಸರಿಪಡಿಸಬೇಕು' ಎಂದಿದ್ದರು.