ಕೊಚ್ಚಿ: ನಟಿ ಮೇಲಿನ ಹಲ್ಲೆ ಪ್ರಕರಣದ ಮೊದಲ ಆರೋಪಿ ಪಲ್ಸರ್ ಸುನಿಗೆ ಕಠಿಣ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. ಏಳೂವರೆ ವರ್ಷಗಳ ಬಳಿಕ ವಿಚಾರಣಾ ನ್ಯಾಯಾಲಯ ಪಲ್ಸರ್ ಸುನಿಗೆ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯದ ಅನುಮತಿಯಿಲ್ಲದೆ ಜಿಲ್ಲೆಯಿಂದ ಹೊರತೆರಳಬಾರದು. ಶಂಕಿತರು ಅಥವಾ ಸಾಕ್ಷಿಗಳನ್ನು ಸಂಪರ್ಕಿಸಕೂಡದು, ಪೋನ್ ನಲ್ಲಿ ಒಂದು ಸಿಮ್ ಮಾತ್ರ ಬಳಸಬಹುದು ಮುಂತಾದ ಕಟ್ಟುನಿಟ್ಟಿನ ನಿಬಂಧನೆಗಳೊಂದಿಗೆ ಜಾಮೀನು ನೀಡಲಾಗಿದ್ದು, ಮಾಧ್ಯಮಗಳಲ್ಲಿ ಮಾತನಾಡುವುದನ್ನೂ ನಿರ್ಬಂಧಿಸಲಾಗಿದೆ.
ಜೊತೆಗೆ ಇಬ್ಬರ ಶ್ಯೂರಿಟಿ ಮತ್ತು ರೂ.1 ಲಕ್ಷ ಬಾಂಡ್ ನೀಡಲು ಸೂಚಿಸಲಾಗಿದೆ. ಸುನಿ ಅವರ ಭದ್ರತೆಯನ್ನು ಗ್ರಾಮಾಂತರ ಪೋಲೀಸರು ಖಾತ್ರಿಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.