ಕಾಸರಗೋಡು: ರಾಷ್ಟ್ರೀಯ ಶುಚಿತ್ವ ಪಕ್ಷಾಚರಣೆಯ ಅಂಗವಾಗಿ ಕೇಂದ್ರ ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಕಾಂಞಂಗಾಡ್ ರೈಲು ನಿಲ್ದಾಣದ ಫ್ಲಾಟ್‍ಫಾಂ ಹಾಗು ಪರಿಸರ ಪ್ರದೇಶವನ್ನು ಶುಚಿಗೊಳಿಸಿದರು.
ಎನ್‍ಎಸ್‍ಎಸ್ ಪ್ರೋಗ್ರಾಂ ಕೋರ್ಡಿನೇಟರ್ ಡಾ.ಎ.ಸದಾನಂದ, ಅಸಿಸ್ಟೆಂಟ್ ರಿಜಿಸ್ಟ್ರಾರ್ ಡಾ. ರಾಜೀವನ್, ವಿದ್ಯಾರ್ಥಿಗಳಾದ ವಿಷ್ಣು ಪ್ರಸಾದ್, ಶರಣ್ಯ ನೇತೃತ್ವ ನೀಡಿದರು. ವೈಸ್ ಚಾನ್ಸಲರ್ ಇನ್‍ಚಾರ್ಜ್ ಪ್ರೊ.ವಿನ್ಸೆಂಟ್ ಮಾಥ್ಯೂ ಉದ್ಘಾಟಿಸಿದರು. ಡೀನ್ ಸ್ಟುಡೆಂಟ್ಸ್ ವೆಲ್ಪೇರ್ ಪ್ರೊ.ರಾಜೇಂದ್ರನ್ ಪಿಲಾಂಗಟ್ಟೆ, ಹಿಂದಿ ಅಧಿಕಾರಿ ಡಾ.ಟಿ.ಕೆ.ಅನೀಶ್ ಕುಮಾರ್, ಎನ್‍ಎಸ್‍ಎಸ್ ಪ್ರೋಗ್ರಾಂ ಕೋರ್ಡಿನೇಟರ್ ಡಾ.ಎಸ್.ಅನ್ಬಳಿ ಮೊದಲಾದವರಿದ್ದರು.