ಮಧೂರು: ಮಧೂರು ಸನಿಹ ರಸ್ತೆ ಬಳಿ ಕನ್ನಡ ಭಾಷೆಗೆ ಅಪಚಾರವಾಗುವ ರೀತಿಯಲ್ಲಿದ್ದ ಅಪಾಯಸೂಚಕ ಫಲಕವನ್ನು ಕೊನೆಗೂ ಸರಿಪಡಿಸಿ ಅಳವಡಿಸಲಾಗಿದೆ.
ಜಿಲ್ಲೆಯ ಅಚ್ಚಗನ್ನಡ ಪ್ರದೇಶಗಳಲ್ಲೂ ಕನ್ನಡ ಭಾಷೆ ಬಳಕೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ವ್ಯಾಪಕ ನಿರ್ಲಕ್ಷ್ಯ ವಹಿಸುಸುತ್ತಾ ಬರುತ್ತಿರುವ ನಡುವೆ, ಮಧೂರು ಸನಿಹ ರಸ್ತೆಬದಿ ವಿಕೃತವಾಗಿ ಕನ್ನಡ ಭಾಷೆಯಲ್ಲಿ ಸೂಚನಾಫಲಕ ಅಳವಡಿಸಲಾಗಿದ್ದು, ಈ ಬಗ್ಗೆ ಕನ್ನಡಿಗರಿಂದ ಭಾರೀ ಅಸಮಧಾನ ವ್ಯಕ್ತವಾಗಿತ್ತು.
ಕನ್ನಡ ಭಾಷೆಯನ್ನು ವಿಕೃತಿಗೊಳಿಸಿ ಸೂಚನಾ ಫಲಕ ಅಳವಡಿಸಿರುವ ಬಗ್ಗೆ 'ಸಮರಸ ಸುದ್ಧಿ' ವಿಶೇಷ ವರದಿ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದಿತ್ತು.
ಇದಕ್ಕೆ ತಕ್ಷಣ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅವರು ಸೂಚನಾಫಲಕ ಸರಿಪಡಿಸಿ, ಅಳವಡಿಸಲು ಕ್ರಮ ಕೈಗೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಧ್ಯ ಪ್ರವೇಶಿಸಿ ಸೂಚನಾಫಲಕ ಸರಿಪಡಿಸಿರುವ ಕ್ರಮಕ್ಕೆ ಕನ್ನಡಿಗರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.