ಕಳೆದ ಮೂರು ತಿಂಗಳಿನಿಂದ ಟೆಲಿಕಾಂ ಅಂಗಳದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಜನರು ಮತ್ತೆ ದೇಶದ ಸರ್ಕಾರಿ ಕಂಪನಿ ಬಿಎಸ್‌ಎನ್‌ಎಲ್‌ಗೆ ಹಿಂದಿರುಗುವ ಬಗ್ಗೆ ಯೋಚಿಸುತ್ತಿದ್ದಾರೆ. 4G ನೆಟ್‌ವರ್ಕ್ ಅಳವಡಿಕೆಗೆ ಬಿಎಸ್‌ಎನ್‌ಎಲ್ ಮುಂದಾಗಿರುವ ಕಾರಣ, ಜನರು ಖಾಸಗಿ ಕಂಪನಿಗಳನ್ನು ತೊರೆಯುವ ನಿರ್ಧಾರಕ್ಕೆ ಬರುತ್ತಿದ್ದಾರೆ.
1.ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್ ರೋಲ್ ಔಟ್ ಪ್ರಕ್ರಿಯೆ ಶುರು ಮಾಡಿದೆ. ದೀಪಾವಳಿ ವೇಳೆಗೆ 75 ಸಾವಿರ 4G ನೆಟ್‌ವರ್ಕ್ ಅಳವಡಿಕೆಯ ಗುರಿ ಹೊಂದಿದ್ದರೂ, ಇದುವರೆಗೆ ಆಗಿದ್ದು ಕೇವಲ 25 ಸಾವಿರ ಮಾತ್ರ. ಇನ್ನೂ 50 ಸಾವಿರ ಟವರ್ ಅಳವಡಿಕೆ ಬಾಕಿಯಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳೋದು ಯಾವಾಗ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಹಾಗಾಗಿ ಹೈ ಸ್ಪೀಡ್ ಡೇಟಾ ಬಳಸಿದವರು ಬಿಎಸ್‌ಎನ್‌ಎಲ್ ಗೆ ಹೋಗುತ್ತಿದ್ದಂತೆ ನೆಟ್‌ವರ್ಕ್ ಸಮಸ್ಯೆ ಎದುರಿಸಬೇಕಾಗುತ್ತದೆ.
2.ಬಿಎಸ್‌ಎನ್‌ಎಲ್ ಸಿಮ್ ಖರೀದಿಯೂ ಅಷ್ಟು ಸರಳ ಅಲ್ಲ. ಉತ್ತರ ಪ್ರದೇಶದ ಗಾಜಿಯಾಬಾದ್ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಮಾತ್ರ ಸಿಮ್ ಹೋಮ್ ಡೆಲಿವರಿ ಸರ್ವಿಸ್ ಲಭ್ಯವಿದೆ. ಹಾಗಾಗಿ ಸಿಮ್ ಖರೀದಿ ಸುಲಭವಾಗಿಲ್ಲ.
3.ನೊಯ್ಡಾ ಭಾಗದಲ್ಲಿಯೇ ಬಿಎಸ್‌ಎನ್‌ಎಲ್ ಬಳಕೆದಾರರು ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಇನ್ನೂ 2G/3G ಸೇವೆಯೇ ಚಾಲ್ತಿಯಲ್ಲಿದೆ. ವಿಶೇಷವಾಗಿ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಮಳೆ ಬಂದರೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಂಪೂರ್ಣ ಕಡಿತಗೊಳ್ಳುತ್ತದೆ. ಪುಣೆ ನಗರದಲ್ಲಿ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಸುಧಾರಣೆಯಾಗಿದೆ ಎಂದು ವರದಿಯಾಗಿದೆ.
4.ಇತ್ತ ಖಾಸಗಿ ಕಂಪನಿಗಳು ತಮ್ಮ ಗ್ರಾಹಕರಿಗೆ 5ಜಿ ಸೇವೆ ನೀಡುವ ನಿಟ್ಟಿನಲ್ಲಿ ನಿರತವಾಗಿವೆ. ಆದರೆ ಬಿಎಸ್‌ಎನ್‌ಎಲ್ ಇನ್ನೂ 4ಜಿ ಅಳಡಿಕೆ ಮಾಡುವ ಕಾರ್ಯದಲ್ಲಿಯೇ ಇದೆ. ಹಾಗಾಗಿ ಅತಿ ಹೆಚ್ಚು ಅಥವಾ ಹೈ ಸ್ಪೀಡ್ ಡೇಟಾ ಬಳಕೆದಾರರು ಬಿಎಸ್‌ಎನ್‌ಎಲ್ ಪೋರ್ಟ್ ಆದ್ರೆ ಅನಾನೂಕಲತೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.