ನವದೆಹಲಿ: ಮುದ್ದಾದ ಕರುವಿನೊಂದಿಗೆ ಸಮಯ ಕಳೆಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮನೆಗೆ ಆಗಮಿಸಿರುವ ಹೊಸ ಅತಿಥಿಯನ್ನು ಪರಿಚಯಿಸಿದ್ದಾರೆ.
ನವದೆಹಲಿ: ಮುದ್ದಾದ ಕರುವಿನೊಂದಿಗೆ ಸಮಯ ಕಳೆಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮನೆಗೆ ಆಗಮಿಸಿರುವ ಹೊಸ ಅತಿಥಿಯನ್ನು ಪರಿಚಯಿಸಿದ್ದಾರೆ.
ಇಲ್ಲಿನ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಅವರ ಅಧಿಕೃತ ನಿವಾಸದ ಆವರಣದಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿದೆ.
'ಗಾವ್ ಸರ್ವಸುಖ ಪ್ರದಾಹ್ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಮಂಗಳಕರವಾಗಿ ನಮ್ಮ ಮನೆಗೆ ಹೊಸ ಸದಸ್ಯರೊಬ್ಬರು ಆಗಮಿಸಿದ್ದಾರೆ. ನಮ್ಮ ನಿವಾಸದಲ್ಲಿರುವ ಪ್ರೀತಿಯ ಹಸುವೊಂದು ಕರುವಿಗೆ ಜನ್ಮ ನೀಡಿದೆ. ಕರುವಿನ ಹಣೆಯ ಮೇಲೆ ಬೆಳಕಿನ ಗುರುತಿರುವುದರಿಂದ 'ದೀಪಜ್ಯೋತಿ' ಎಂದು ನಾಮಕರಣ ಮಾಡಲಾಗಿದೆ' ಎಂದು 'ಎಕ್ಸ್'ನಲ್ಲಿ ಅವರು ತಿಳಿಸಿದ್ದಾರೆ.
ದೀಪಜ್ಯೋತಿಯನ್ನು ಮನೆಗೆ ಒಳಗೆ ಬರಮಾಡಿಕೊಂಡಿರುವ ಅವರು, ದುರ್ಗಾ ಮಾತೆಯ ಮುಂದೆ ಪ್ರಾರ್ಥನೆ ಮಾಡಿದ್ದಾರೆ. ಕರುವಿಗೆ ಶಾಲು ಹೊದಿಸಿ ಹಣೆಗೆ ಮುತ್ತಿಕ್ಕಿದ್ದಾರೆ. ತೋಟಕ್ಕೆ ಕರೆದುಕೊಂಡು ಹೋಗಿ ಕರುವಿನೊಂದಿಗೆ ಆಟವಾಡಿದ್ದಾರೆ. ಈ ಕುರಿತ ವಿಡಿಯೊವನ್ನು ಹಂಚಿಕೊಂಡಿದ್ದಾರೆ.