ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ದೂರಸಂಪರ್ಕ ಇಲಾಖೆಗೆ (DoT) ಕಳೆದ ಹಲವಾರು ವರ್ಷಗಳಿಂದ ಬಾಕಿ ಇರುವ ದಂಡವನ್ನು ಪಾವತಿಸುವಂತೆ ಹೇಳಿಕೆ. ಇದಕ್ಕೆ ಕಾರಣವೆಂದರೆ ದೇಶದ ಟೆಲಿಕಾಂ ಕಂಪನಿಗಳು ಜನ ಸಾಮಾನ್ಯರಿಗೆ ಬರುವ ವಂಚಕರ ಕರೆಗಳನ್ನು (Scam Call) ನಿಲ್ಲಿಸುವಂತೆ ನಿಯಮವೊಂದನ್ನು ನೀಡಿತ್ತು ಇದರಡಿಯಲ್ಲಿ ಕೆಲವೊಂದು ಟೆಲಿಕಾಂ ಕಂಪನಿಗಳು ವಿಫಲವಾದ ಕಾರಣಕ್ಕಾಗಿ ಸುಮಾರು 8 ರಿಂದ 9 ವರ್ಷಗಳಿಂದ ಹಾಕಿದ ದಂಡವನ್ನು ಪಾವತಿಸುವಂತೆ ಹಲವಾರು ಬಾರಿ ಕೇಳಿಕೊಂಡಿದ್ದ ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಷನ್ ಈಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (TRAI) ಪತ್ರ ಬರೆದಿದೆ.
ಬರೋಬ್ಬರಿ 115 ಕೋಟಿ ರೂಪಾಯಿಗಳ ಬಾಕಿ
ಹಿನ್ನಲೆಯಲ್ಲಿ ಈವರೆಗೆ ದಂಡ ನೀಡಲು ವಿಫಲರಾದ ಟೆಲಿಕಾಂ ಆಪರೇಟರ್ ಕಂಪನಿಗಳ ಬ್ಯಾಂಕ್ ಗ್ಯಾರಂಟಿಗಳನ್ನು (Encash) ಪೂರ್ವ ಅನುಮೋದನೆ ನೀಡುವಂತೆ TRAI ಹೇಳಿದೆ. ಟ್ರಾಯ್ ಕಾಯಿದೆಯಡಿ ನಿಯಮಗಳನ್ನು ಪಾಲಿಸದ ಟೆಲಿಕಾಂಗಳ ಪರವಾನಗಿಯನ್ನು ರದ್ದುಗೊಳಿಸುವ ಅಧಿಕಾರ ನಿಯಂತ್ರಕರಿಗೆ ಇದೆ ಎಂದು ಹಿರಿಯ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಆದಾಗ್ಯೂ ಅಂತಹ ಹಂತವು ತುಂಬಾ ತೀವ್ರವಾಗಿರುತ್ತದೆ ಮತ್ತು ಬದಲಾಗಿ ಬ್ಯಾಂಕ್ ಗ್ಯಾರಂಟಿಗಳಿಂದ 115 ಕೋಟಿ ರೂಪಾಯಿಗಳ ಬಾಕಿಯನ್ನು ಮರುಪಡೆಯಲು ಪ್ರಸ್ತಾಪಿಸಲಾಗಿದೆ.
ಹತ್ತಾರು ವಿಭಾಗ ಆನ್‌ಲೈನ್ ವಂಚನೆಗಳ ಸಮಸ್ಯೆಯ ವಿರುದ್ಧ ಹೋರಾಡತ್ತಿವೆ
ತೊಂದರೆಯ ಕರೆಗಳು ಮತ್ತು ಆನ್‌ಲೈನ್ ವಂಚನೆಗಳ ಸಮಸ್ಯೆಯ ವಿರುದ್ಧ ಹೋರಾಡಲು ಹಲವಾರು ಸರ್ಕಾರಿ ಸಂಸ್ಥೆಗಳು ಕೈಜೋಡಿಸುತ್ತಿವೆ. ಟ್ರಾಯ್, ಸೆಬಿ, ಆರ್‌ಬಿಐ, ಗೃಹ ಸಚಿವಾಲಯ ಮತ್ತು ದೂರಸಂಪರ್ಕ ಇಲಾಖೆ ಸೇರಿದಂತೆ ಹಲವಾರು ಉನ್ನತ ನಿಯಂತ್ರಕರು ಮತ್ತು ಸಚಿವಾಲಯಗಳು ಸಮಸ್ಯೆಯನ್ನು ಪರಿಹರಿಸಲು ಸಹಕರಿಸಿವೆ. ಸರ್ಕಾರ ಮತ್ತು ಟ್ರಾಯ್‌ನ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಟೆಲಿಕಾಂ ವಾಹಕಗಳು ಆಯ್ದ ಸ್ಥಳಗಳಲ್ಲಿ ಕಾಲರ್ ಐಡಿ ಸೇವಾ ಪ್ರಯೋಗಗಳನ್ನು ಪ್ರಾರಂಭಿಸಿವೆ ಎಂದು ವರದಿಯಾಗಿದೆ.