HEALTH TIPS

IAF Su-30MKI ಯುದ್ಧ ವಿಮಾನಕ್ಕೆ HALನಿಂದ 240 ಎಂಜಿನ್: ಸಂಪುಟ ಸಮಿತಿ ಅಸ್ತು

 ವದೆಹಲಿ: ಭಾರತೀಯ ವಾಯುಪಡೆಯಲ್ಲಿರುವ ಸುಖೋಯ್-30ಎಂಕೆಐ ಯುದ್ಧ ವಿಮಾನಕ್ಕೆ ಅಗತ್ಯವಿರುವ 240 ಏರೊ ಎಂಜಿನ್‌ಗಳನ್ನು ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ನಿಂದ ಖರೀದಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಸಮಿತಿ ಸೋಮವಾರ ಒಪ್ಪಿಗೆ ಸೂಚಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಚಿವಾಲಯ, '₹26 ಸಾವಿರ ಕೋಟಿ ಮೊತ್ತದ ವಹಿವಾಟು ಇದಾಗಿದ್ದು, ಎಂಜಿನ್‌ಗಳ ಹಸ್ತಾಂತರ 2025ರಿಂದ ಆರಂಭವಾಗಿ ಮುಂದಿನ ಎಂಟು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ' ಎಂದಿದೆ.

'ಸು-30ಎಂಕೆಐ ಭಾರತೀಯ ವಾಯುಸೇನೆಯಲ್ಲಿರುವ ಅತ್ಯಂತ ಶಕ್ತಿಶಾಲಿ ಫೈಟರ್ ಜೆಟ್‌ ಆಗಿದೆ. ಇದಕ್ಕೆ ಅಗತ್ಯವಿರುವ ಎಎಲ್‌-31ಎಫ್‌ಪಿ ಎಂಬ ಏರೊ ಎಂಜಿನ್‌ಗಳನ್ನು ಖರೀದಿಸುವ ಕುರಿತು ರಕ್ಷಣಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಒಟ್ಟು 240 ಎಂಜಿನ್‌ಗಳಿಗೆ ತೆರಿಗೆ ಹಾಗೂ ಇನ್ನಿತರ ಸುಂಕ ಸೇರಿ ಒಟ್ಟು ₹26 ಸಾವಿರ ಕೋಟಿಯಾಗಲಿದೆ' ಎಂದು ಹೇಳಿದೆ.

'ಈ ಎಎಲ್‌-31ಎಫ್‌ಪಿ ಎಂಜಿನ್‌ ಭಾರತದಲ್ಲಿ ತಯಾರಾಗುತ್ತಿದ್ದು, ಇದರಲ್ಲಿ ಶೇ 54ರಷ್ಟು ಸ್ವದೇಶಿ ಉಪಕರಣಗಳಿವೆ. ಈ ಎಂಜಿನ್‌ ಎಚ್‌ಎಎಲ್‌ನ ಕೋರಾಪುಟ್ ವಿಭಾಗದಲ್ಲಿ ತಯಾರಾಗಲಿದೆ' ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries