ನವದೆಹಲಿ: ಮಲಯಾಳ ದಿನಪತ್ರಿಕೆ 'ಮಾತೃಭೂಮಿ'ಯ ಎಂ.ವಿ.ಶ್ರೇಯಾಂಸ್ ಕುಮಾರ್ ಅವರು ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ (ಐಎನ್‌ಎಸ್) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನವದೆಹಲಿ: ಮಲಯಾಳ ದಿನಪತ್ರಿಕೆ 'ಮಾತೃಭೂಮಿ'ಯ ಎಂ.ವಿ.ಶ್ರೇಯಾಂಸ್ ಕುಮಾರ್ ಅವರು ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ (ಐಎನ್‌ಎಸ್) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಡೆಪ್ಯುಟಿ ಪ್ರೆಸಿಡೆಂಟ್ ಆಗಿ ವಿವೇಕ್ ಗುಪ್ತಾ (ಸನ್ಮಾರ್ಗ್), ಉಪಾಧ್ಯಕ್ಷರಾಗಿ ಕರಣ್ ರಾಜೇಂದ್ರ (ಲೋಕಮತ) ಮತ್ತು ಗೌರವ ಖಜಾಂಚಿಯಾಗಿ ತನ್ಮಯ್ ಮಾಹೇಶ್ವರಿ (ಅಮರ್ ಉಜಾಲ) ಅವರು ಆಯ್ಕೆಯಾದರು.
ಕೆ.ಎನ್.ತಿಲಕ್ ಕುಮಾರ್ (ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಸಮೂಹದ ಮಾತೃಸಂಸ್ಥೆಯಾದ ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ), ಎಸ್.ಬಾಲಸುಬ್ರಮಣ್ಯನ್ ಆದಿತ್ಯನ್ (ಡೈಲಿ ತಂತಿ) ಮತ್ತು ವಿವೇಕ್ ಗೋಯೆಂಕಾ (ದಿ ಇಂಡಿಯನ್ ಎಕ್ಸ್‌ಪ್ರೆಸ್) ಸೇರಿದಂತೆ 41 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.