ಈ Instagram ಪ್ರಪಂಚದಾದ್ಯಂತದ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಎಲ್ಲ Instagram ಖಾತೆಗಳಿಂದ ಫೋಟೋ ಮತ್ತು ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಅನುವತಿಯಿಲ್ಲ. Instagram ಖಾತೆಗಳಿಂದ ಫೋಟೋ ಮತ್ತು ವಿಡಿಯೋಗಳನ್ನು ಡೌನ್‌ಲೋಡ್ ಮಾಡುವ ಮುಂಚೆ ಅವರ ಅನುಮತಿ ಪಡೆಯಬೇಕಿದೆ. ನೀವು ಇತರ ವೆಬ್‌ಸೈಟ್‌ಗಳನ್ನು (Third Party Apps/Website) ಅವಲಂಬಿಸಬೇಕಾಗುತ್ತದೆ. ಆಗಾಗಿ ನೀವು ಯಾರದೇ Instagram ವೀಡಿಯೊ ಅಥವಾ ಸ್ಟೋರಿಗಳನ್ನು ಡೌನ್‌ಲೋಡ್ ಮಾಡುವ ಮೊದಲು ಅವರ ಅನುಮತಿಯನ್ನು ಪಡೆಯುವುದು ಒಳಿತು.
ಫೋಟೋ ಮತ್ತು ವಿಡಿಯೋಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಹಂತ 1: Instagram ವೀಡಿಯೊ, ಫೋಟೋ ಅಥವಾ ಸ್ಟೋರಿಗಳನ್ನು ಡೌನ್‌ಲೋಡ್ ಮಾಡಲು Storysaver.net ವೆಬ್‌ಸೈಟ್ ಅಥವಾ Photo & Video Downloader for IG ಆಪ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2: ಒಮ್ಮೆ ನೀವು Storysaver.net ವೆಬ್‌ಸೈಟ್‌ನಲ್ಲಿದ್ದರೆ ನೀವು ಸರ್ಚ್ ಬಾಕ್ಸ್ ಒಳಗೆ ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರ ಹೆಸರನ್ನು ನಮೂದಿಸಿ ಮತ್ತು ಡೌನ್‌ಲೋಡ್ ಬಟನ್ ಒತ್ತಿರಿ. ಇದು ನಿಮಗೆ ಫೋಟೋಗಳು ಅಥವಾ ಸ್ಟೋರಿಗಳನ್ನು ತೋರಿಸುತ್ತದೆ. ನೀವು ಸಾರ್ವಜನಿಕ ಖಾತೆಯ ನಿರ್ದಿಷ್ಟ ವೀಡಿಯೊವನ್ನು ಡೌನ್‌ಲೋಡ್ ಮಾಡಲು ಬಯಸಿದರೆ ನೀವು ಆ ವೀಡಿಯೊದ ಲಿಂಕ್ ಅನ್ನು ಸರ್ಚ್ ಬಾಕ್ಸ್ ಒಳಗೆ ನಮೂದಿಸಿ ಮತ್ತು ಡೌನ್‌ಲೋಡ್ ಅನ್ನು ಒತ್ತಿ ನಂತರ “Save as video” ಬಟನ್ ಒತ್ತಿ.
ಹಂತ 3: ನೀವು ಬಳಕೆದಾರ ಹೆಸರನ್ನು ನಮೂದಿಸಿದ್ದರೆ ನಂತರ ಸ್ಟೋರಿಗಳನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸೇವ್ ಬಟನ್ ಒತ್ತಿರಿ ಅಷ್ಟೇ. ಮಾಹಿತಿ ಇಷ್ಟವಾಗಿದ್ದ್ದಾರೆ ದಯವಿಟ್ಟು ತಿಳಿಯದವರೊಂದಿಗೆ ಹಂಚಿಕೊಳ್ಳಿ.
ನಿಮ್ಮ ಸ್ವಂತ Instagram ಡೇಟಾವನ್ನು ಡೌನ್‌ಲೋಡ್ ಮಾಡುವುದು ಹೇಗೆ?
ನಿಮ್ಮ ಇನ್‌ಸ್ಟಾಗ್ರಾಮ್ ಡೇಟಾವನ್ನು ನೀವು ಹೇಗೆ ಡೌನ್‌ಲೋಡ್ ಮಾಡಬಹುದು ಎಂಬುದನ್ನು ಮೊದಲು ಹೇಳೋಣ. ನಿಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಲು www.instagram.com/download/request/ ಗೆ ಹೋಗಿ. ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಲು ಪುಟವು ನಿಮ್ಮನ್ನು ಕೇಳುತ್ತದೆ. ನಿಮ್ಮ ಖಾತೆಯನ್ನು ನೋಂದಾಯಿಸಲು ನೀವು ಬಳಸಿದ ಅದೇ ಇಮೇಲ್ ವಿಳಾಸ ಇದಾಗಿರಬೇಕು.
ಮುಂದಿನ ಪರದೆಯಲ್ಲಿ ನಿಮ್ಮ ಖಾತೆಯ ಪಾಸ್‌ವರ್ಡ್ ಅನ್ನು ನಮೂದಿಸಿ. ನೀವೇ ದೃಢೀಕರಿಸಿದ ನಂತರ ಕಂಪನಿಯು ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸುತ್ತದೆ. ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸಲು ಮತ್ತು ಡೌನ್‌ಲೋಡ್ ಮಾಡಲು ನಿಮಗೆ ಲಭ್ಯವಾಗುವಂತೆ ಮಾಡಲು ಇದು 48 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ ಎಂದು ವರದಿಯಾಗಿದೆ.