ನವದೆಹಲಿ: ಶಬರಿಮಲೆ ಯಾತ್ರಾರ್ಥಿಗಳು ಸೇರಿದಂತೆ ಸಾರಿಗೆ ಸೇವೆಗಳಿಗೆ ವಿಧಿಸುವ ದರವನ್ನು ನಿರ್ಧರಿಸುವಲ್ಲಿ ತನ್ನ ಪಾತ್ರವಿಲ್ಲ ಎಂದು ಕೆಎಸ್‍ಆರ್‍ಟಿಸಿ ಹೇಳಿದೆ.
ಶಬರಿಮಲೆ ಯಾತ್ರಿಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ನಿಲಯ್ಕಲ್-ಪಂಬಾ ಮಾರ್ಗದಲ್ಲಿ ಯಾತ್ರಾರ್ಥಿಗಳಿಗೆ ಉಚಿತ ಸೇವೆ ನೀಡಲು ಅನುಮತಿ ಕೋರಿ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯ ವಿರುದ್ಧ ನೀಡಿರುವ ಅಫಿಡವಿಟ್‍ನಲ್ಲಿ ಕೆಎಸ್‍ಆರ್‍ಟಿಸಿ ಈ ವಿಷಯಗಳನ್ನು ಸ್ಪಷ್ಟಪಡಿಸಿದೆ.
ನಿಲಯ್ಕಲ್ - ಪಂಬಾ ಮಾರ್ಗವನ್ನು ರಾಷ್ಟ್ರೀಕರಣಗೊಳಿಸಲಾಗಿದ್ದು, ಕೆಎಸ್‍ಆರ್‍ಟಿಸಿ ಮಾತ್ರ ಅಲ್ಲಿ ಕಾರ್ಯನಿರ್ವಹಿಸಲು ಅಧಿಕಾರ ಹೊಂದಿದೆ. ರಾಷ್ಟ್ರೀಕೃತ ಮಾರ್ಗಗಳಲ್ಲಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‍ಗಳನ್ನು ಸ್ಟೇಜ್ ಕ್ಯಾರೇಜ್ ವಾಹನಗಳಾಗಿ ಸಂಚಾರ ನಡೆಸಲು ಯಾವುದೇ ಅನುಮತಿ ನೀಡಲಾಗುವುದಿಲ್ಲ ಎಂದು ಅಫಿಡವಿಟ್ ಹೇಳುತ್ತದೆ.
ಸಾರ್ವಜನಿಕರಲ್ಲಿ ಅನಾರೋಗ್ಯಕರ ಪೈಪೆÇೀಟಿ ಮತ್ತು ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕುವ ಮೂಲಕ ದೂರುದಾರರು ಅನಗತ್ಯ ಆರ್ಥಿಕ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಎಸ್‍ಆರ್‍ಟಿಸಿ ಆರೋಪಿಸಿದೆ.
ಮೋಟಾರು ವಾಹನಗಳ ಕಾಯಿದೆ, 1988 ರ ಸೆಕ್ಷನ್ 67 ಸ್ಟೇಜ್ ಕ್ಯಾರೇಜ್ ಸೇವೆಗಳು ಮತ್ತು ಸರಕು ಸಾಗಣೆಗಳ ದರಗಳನ್ನು ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. 2010ರಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಎಂ. ರಾಮಚಂದ್ರನ್ ಸಮಿತಿಯ ಶಿಫಾರಸಿನಂತೆ 2011ರಲ್ಲಿ ಪ್ರಯಾಣ ದರ ಪರಿಷ್ಕರಿಸಿ ಆದೇಶ ಹೊರಡಿಸಲಾಗಿತ್ತು. ಶುಲ್ಕಗಳು ಈ ಆದೇಶಗಳನ್ನು ಆಧರಿಸಿವೆ. ಅಫಿಡವಿಟ್ ಪ್ರಕಾರ, ಹಬ್ಬದ ಸಮಯದಲ್ಲಿ ಮತ್ತು ಸರ್ಕಾರದ ಆದೇಶದಂತೆ 30 ಪ್ರತಿಶತ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ.
ಮಂಡಲ-ಮಕರ ಬೆಳಕು ಅವಧಿಯಲ್ಲಿ ಯಾತ್ರಾರ್ಥಿಗಳು ಎದುರಿಸುತ್ತಿರುವ ಪ್ರಯಾಣ ಮತ್ತು ಸಂಕಷ್ಟವನ್ನು ಪರಿಹರಿಸಲು 20 ಬಸ್‍ಗಳನ್ನು ಬಾಡಿಗೆಗೆ ಪಡೆಯಲು ಮತ್ತು ಅವುಗಳನ್ನು ಉಚಿತವಾಗಿ ಸಂಚಾರ ಸೇವೆ ನಡೆಸಲು ಅನುಮತಿ ಕೋರಿ ವಿಎಚ್‍ಪಿ ಸುಪ್ರೀಂ ಕೋರ್ಟ್‍ಗೆ ಮೊರೆ ಹೋಗಿತ್ತು.