ನವದೆಹಲಿ: ಮಲಯಾಳಂ ಚಿತ್ರರಂಗವನ್ನೇ ಅಲ್ಲಾಡಿಸಿರುವ ಜಸ್ಟಿಸ್ ಹೇಮಾ ಸಮಿತಿ ವರದಿ ಬಹಿರಂಗಗೊಂಡ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಸರಣಿ ಆರೋಪಗಳು ಕೇಳಿ ಬರುತ್ತಿದ್ದು, ಚಿತ್ರರಂಗದಲ್ಲಿ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ಹಗರಣ ದೇಶಾದ್ಯಂತ ಸದ್ದು ಮಾಡುತ್ತಿದೆ.
ಹೇಮಾ ಸಮಿತಿ ವರದಿ ಬಹಿರಂಗಗೊಂಡ ಬಳಿಕ ಖ್ಯಾತ ನಟಿಯರು ತಾವು ಅನುಭವಿಸಿದ ದೌರ್ಜನ್ಯದ ಕುರಿತು ನಟಿಯರು ಮೌನ ಮುರಿಯುತ್ತಿದ್ದಾರೆ.ಮಲಯಾಳಂ ಮಾತ್ರವಲ್ಲದೇ ಬೇರೆ ಚಿತ್ರರಂಗದ ನಟಿಯರು ಈ ಬಗ್ಗೆ ಮಾತನಾಡಿದ್ದು,ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲಿ ಈ ರೀತಿ ಪದ್ಧತಿ ದೆಯಾ ಎಂಬ ಅನುಮಾನ ಮೂಡಲು ಶುರುವಾಗಿದೆ. ಈ ಬಗ್ಗೆ ಖ್ಯಾತ ನೀಡಿರುವ ಹೇಳಿಕೆ ಇದಕ್ಕೆ ಪುಷ್ಠಿ ನೀಡುವಂತಿದೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಕಾಮ್ಯಾ ಪಂಜಾಬಿ, ಕಿರುತೆರೆ ತುಂಬಾ ಸ್ವಚ್ಛವಾಗಿದ್ದು, ಹಿಂದೆ ಏನಾಗಿತ್ತೋ ನನಗೆ ಅದರ ಬಗ್ಗೆ ತಿಳಿದಿಲ್ಲ. ಆದರೆ, ಈಗ ತುಂಬಾ ಕ್ಲೀನ್ ಆಗಿದ್ದು, ಇಲ್ಲಿ ಆ ರೀತಿಯ ಕೊಳಕು ಸಂಸ್ಕೃತಿ ಇಲ್ಲ. ನಿಮ್ಮಲ್ಲಿ ಪ್ರತಿಭೆ ಇದ್ದರೆ ಖಂಡಿತವಾಗಿಯೂ ಉತ್ತಮ ಅವಕಾಶ ಸಿಗುತ್ತದೆ. ಮನರಂಜನಾ ಉದ್ಯಮದಲ್ಲಿ ದೂರದರ್ಶನವು ಸುರಕ್ಷಿತ ಸ್ಥಳವಾಗಿದ್ದು, ಇಲ್ಲಿ ಲೈಂಗಿಕ ದೌರ್ಜನ್ಯ ನಡೆಯುವುದಿಲ್ಲ. ಏನೇ ಆಗಲಿ, ಏಕೆಂದರೆ ಪರಸ್ಪರ ಒಪ್ಪಿಗೆ ಇದೆ. ಪಾತ್ರಕ್ಕಾಗಿ ಯಾರು ಯಾರ ಜೊತೆ ಮಲಗಲು ಯಾರಿಗೂ ಹೇಳುವುದಿಲ್ಲ.
ಚಿತ್ರರಂಗದಲ್ಲಿ ಹೆಣ್ಣಿನ ಸಮ್ಮತಿಯಿಲ್ಲದೇ ಈ ತರಹದ ಘಟನೆ ನಡೆಯಲು ಸಾಧ್ಯವಿಲ್ಲ. ನಮ್ಮ ಜೊತೆ ಮಲಗಲೇಬೇಕು ಎಂದು ಇಲ್ಲಿ ಯಾರು ಯಾರನ್ನೂ ಬಲವಂತ ಮಾಡುವುದಿಲ್ಲ. ಯಾರಾದರೂ ಮುಟ್ಟಿದರೆ ಅವರ ಸ್ಪರ್ಶದಲ್ಲಿ ಕಾಮದ ಬಯಕೆ ಇದೇ ಎಂದು ಅನಿಸಿದಾಗ ನೇರವಾಗಿಯೇ ನನಗೆ ಇದೆಲ್ಲ ಇಷ್ಟ ಇಲ್ಲ ಎಂದು ಹೇಳಿದರೆ ಅದು ಅಲ್ಲಿಗೆ ಮುಗಿಯುತ್ತೆ ಆ ನಂತರ ಅವರು ಮತ್ತೆ ನಿಮ್ಮನ್ನು ಮುಟ್ಟಲು ಬರುವುದಿಲ್ಲ.
ಅನೇಕರು ನಮಗೆ ಕಹಿ ಅನುಭವವಾಗಿದೆ. ನಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳುತ್ತಾರೆ. ಆದರೆ ನಾನು ಆಗಲೇ ಹೇಳಿದಂತೆ ಹುಡುಗಿ ಬಯಸದೇ ಇದ್ದರೆ, ಒಪ್ಪದೇ ಇದ್ದರೆ ಇದೆಲ್ಲ ನಡೆಯಲ್ಲ ಎಂದಿದ್ದಾರೆ. ಇನ್ನೂ ನಾನು ನನ್ನ ಈ ಸುಧೀರ್ಘ ಪ್ರಯಾಣದಲ್ಲಿ ಸುಮಾರು ಹೆಣ್ಣು ಬಾಕರನ್ನು ನಾನು ನೋಡಿದ್ದೇನೆ. ಆದರೆ ನಮ್ಮ ಒಪ್ಪಿಗೆ ಇಲ್ಲದೆ ಇಲ್ಲಿಯೇನು ನಡೆಯಲ್ಲ ಎಂದು ನೇರವಾಗಿ ಮಾತನಾಡಿದ್ದಾರೆ. ಕಿರುತೆರೆಯಲ್ಲಿಯಂತೂ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕೃತಿ ಇಲ್ಲ. ಸಿನಿಮಾರಂಗ ಹೇಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ನಟಿ ಕಾಮ್ಯಾ ಪಂಜಾಬಿ ಹೇಳಿದ್ದಾರೆ.