HEALTH TIPS

ರಕ್ಷಣಾ ಇಲಾಖೆ ವೆಬ್‌ಸೈಟ್‌ಗೆ ಕನ್ನ ಯತ್ನ: 'ಫಿಶಿಂಗ್‌' ಲಿಂಕ್‌ ಪತ್ತೆ ಮಾಡಿದ NIC

ವದೆಹಲಿ: 'ಫಿಶಿಂಗ್‌' ಮೂಲಕ, ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ ಅನ್ನು ಹೋಲುವ ಜಾಲತಾಣ ಅಭಿವೃದ್ಧಿಪಡಿಸಿ, ಸೂಕ್ಷ್ಮ ಮತ್ತು ಮಹತ್ವದ ದಾಖಲೆಗಳ ಕಳ್ಳತನಕ್ಕೆ ನಡೆಸಿದ ಯತ್ನವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಪತ್ತೆ ಮಾಡಿದೆ.

ಮಾಹಿತಿ ಕಳುವಿಗಾಗಿ ಅಭಿವೃದ್ಧಿಪಡಿಸಿದ್ದ ಎರಡು 'ಫಿಶಿಂಗ್‌ ಲಿಂಕ್‌'ಗಳನ್ನು ಎನ್‌ಐಸಿ ಗುರುತಿಸಿದ್ದು, ಸಂಬಂಧಪಟ್ಟ ಇಲಾಖೆಗಳಿಗೆ ಈ ಕುರಿತು ಸಲಹೆ ನೀಡಿದೆ.

ವಿಶ್ವಾಸಾರ್ಹ ಸಂಸ್ಥೆಗಳ ಹೆಸರು ಬಳಸಿಕೊಂಡು ಸುಳ್ಳು ಸಂದೇಶ, ಇ- ಮೇಲ್‍ಗಳ ಮೂಲಕ ಲಿಂಕ್ ಕಳಿಸಿ, ಆ ಮೂಲಕ ನಡೆಸುವ ಮೋಸದ ವ್ಯವಹಾರವನ್ನು 'ಫಿಶಿಂಗ್' ಎನ್ನುತ್ತಾರೆ.

'ಎನ್‌ಐಸಿ ಪತ್ತೆ ಮಾಡಿದ್ದ ಎರಡೂ ಫಿಶಿಂಗ್‌ ಲಿಂಕ್‌'ಗಳಿಗೆ ಲಾಗಿನ್‌ ಆದಾಗ, ಅವುಗಳು ರಕ್ಷಣಾ ಇಲಾಖೆಯ ವೆಬ್‌ಸೈಟ್‌ (www.mod.gov.in) ತೋರಿಸಿದವು. ಬಳಕೆದಾರರು ಅದನ್ನು ರಕ್ಷಣಾ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ ಎಂದೇ ನಂಬುವಂತೆ ಮಾಡುವುದು ವಂಚಕ ಉದ್ದೇಶವಾಗಿತ್ತು' ಎಂದು ಎನ್‌ಐಸಿ ತಿಳಿಸಿದೆ.

ನಂಬಲರ್ಹವಲ್ಲದ ಮೂಲಗಳಿಂದ ಬರುವ ಇ-ಮೇಲ್‌ಗಳನ್ನು ತಿರಸ್ಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಂಚಿಸುವ ಉದ್ದೇಶದ ಇ-ಮೇಲ್‌ಗಳು ಬಂದಾಗ, ಇ-ಮೇಲ್‌ ವಿಳಾಸದಲ್ಲಿರುವ ಅಕ್ಷರಗಳು ಅಥವಾ ವ್ಯಾಕರಣ ಸಂಬಂಧಿತ ದೋಷಗಳನ್ನು ಪರಿಶೀಲಿಸುವ ಮೂಲಕ ಫಿಶಿಂಗ್‌ ದಾಳಿ ತಡೆಗಟ್ಟುವಂತೆಯೂ ಸಲಹೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries