HEALTH TIPS

ಇನ್ಮುಂದೆ OTP ಬರೋದು ತಡವಾಗಲಿದೆ, ಯಾಕೆ ?

 ಟಿಪಿ ಎನ್ನುವುದು ಬಹಳ ಮುಖ್ಯವಾದದ್ದು, ಒಟಿಯು ಅಧಿಕೃತವಾಗಿ ಹಲವು ಕೆಲಸಗಳಿಗೆ ಬಳಕೆಯಾಗುತ್ತದೆ.ಆದರೆ, ಇದೇ ಒಟಿಪಿ ಹೆಸರಿನಲ್ಲಿ ಜನ ಕೋಟ್ಯಾಂತರ ರೂಪಾಯಿಯನ್ನು ಕಳೆದುಕೊಂಡಿರುವ ಉದಾಹರಣೆ ಇದೆ. ಇದೀಗ ಒಟಿಪಿಗಳಿಂದ ಆಗುವ ಅಥವಾ ಆಗಬಹುದಾದ ಅಪಾಯವನ್ನು ತಪ್ಪಿಸಲು ಕೇಂದ್ರ ಸರ್ಕಾರವು ಮುಂದಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಇನ್ಮುಂದೆ ನೀವು ಮೋಸ ಹೋಗುವುದು ತಪ್ಪಲಿದೆ. ಹಾಗಾದರೆ ಒಟಿಪಿಯಲ್ಲಿ ಯಾವ ಬದಲಾವಣೆ ಆಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಒಟಿಪಿಗಳಿಂದಲೇ One-time password (OTP) ಅಮಾಯಕ ಜನ, ಬ್ಯಾಂಕಿಂಗ್‌ ವ್ಯವಸ್ಥೆ ತಿಳಿಯದೆ ಇರುವವರು ಕೋಟ್ಯಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಜನರ ಮುಗ್ಧತೆಯನ್ನು ಬಳಸಿಕೊಂಡೇ ಸೈಬರ್ ವಂಚಕರು ಜನರ ಖಾತೆಗಳಿಗೆ ಲಗ್ಗೆ ಇಟ್ಟಿದ್ದು ಇದೆ. ಇದೀಗ TRAI ಹೊಸ ನಿಯಮವನ್ನು ಜಾರಿ ಮಾಡುತ್ತಿದೆ. ಇದರಿಂದ ಒಟಿಪಿ ಬರುವುದು ವಿಳಂಬವ ಆಗಲಿದೆ. ಒಟಿಪಿ ಏಕೆ ವಿಳಂಬವಾಗಲಿದೆ ಎನ್ನುವುದರ ಹಿಂದೆಯೂ ಸ್ವಾರಸ್ಯಕರವಾದ ಅಂಶಗಳಿವೆ.

ಟ್ರಾಯ್‌ನ ಹೊಸ ನಿಯಮದಿಂದಾಗಿ ಇನ್ಮುಂದೆ ನಿಮಗೆ ಒಟಿಪಿ ಬರುವುದು ವಿಳಂಬವಾಗಲಿದೆ. ಒಟಿಪಿ ಪ್ರಕ್ರಿಯೆ ವಿಳಂಬವಾಗುವುದರಿಂದ ಆನ್‌ಲೈನ್‌ ಶಾಪಿಂಗ್‌, ಆರ್ಡರ್‌ಗಳನ್ನು ಮಾಡುವುದರಲ್ಲೂ ಕೆಲವು ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಆನ್‌ಲೈನ್‌ ಮೂಲಕ ನಡೆಯುವ ವಹಿವಾಟಿನ ಮೇಲೆಯೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಸೆಪ್ಟೆಂಬರ್ 1 ರಿಂದ OTP ಬರುವುದು ತಡವಾಗಲಿದೆ. ಇದರಿಂದ ಈ ಹಿಂದೆ ಸುಲಭವಾಗಿ ಆಗುತ್ತಿದ್ದ ಬುಕ್ಕಿಂಗ್ ಮತ್ತು ಶಾಪಿಂಗ್‌ ಕೆಲಸಗಳು ನಿಗದಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.


ಈಗೆಲ್ಲ ಸಾಮಾನ್ಯವಾಗಿ ಕೆಲವೇ ಕ್ಷಣಗಳಲ್ಲಿ ಒಟಿಪಿ ನಿಮ್ಮ ಪೋನ್‌ ನಂಬರ್‌ಗೆ ಬರುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಕೆಲವು ನಿಮಿಷಗಳ ನಂತರ ಒಟಿಪಿ ಬರಲಿದೆ. OTP SMS ವಿಳಂಬವಾಗುವುದಕ್ಕೆ ಟ್ರಾಯ್‌ ಒಟಿಪಿಗಳನ್ನು ಪರಿಶೀಲನೆ ಮಾಡಲು ಮುಂದಾಗಿರುವುದೇ ಕಾರಣ. ಟ್ರಾಯ್‌ ಈ ರೀತಿ ಮಾಡುವುದರ ಹಿಂದೆ ಮೋಸವನ್ನು ತಪ್ಪಿಸುವ ಉದ್ದೇಶವಿದೆ. ಆದರೆ, ಇದರಿಂದ ನಿಮಗೆ ಹೆಚ್ಚಿನ ಸಮಸ್ಯೆ ಏನು ಆಗುವುದಿಲ್ಲ. OTP ಸಂದೇಶ ವಿಳಂಬವಾದರೂ ಸಮಸ್ಯೆ ಆಗುವುದಿಲ್ಲ. ಟ್ರಾಯ್‌ ನಿಮ್ಮ ಸುರಕ್ಷತೆಯ ಸೃಷ್ಟಿಯಿಂದ ಮಾತ್ರ ಟ್ರಾಯ್‌ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಹಿಂದೆ ಆರ್ಥಿಕ ಭದ್ರತೆಯ ಉದ್ದೇಶವಿದೆ ಅಷ್ಟೇ. ಟ್ರಾಯ್‌ನ ಈ ನಿರ್ಧಾರದಿಂದ ನಿಮಗೆ ಅಲ್ಪ ಪ್ರಮಾಣದಲ್ಲಿ ಅಡಚಣೆ ಉಂಟಾಗಬಹುದು ನಿಜ. ಆದರೆ, ಹಣ ಕಳೆದುಕೊಳ್ಳುವಂತಹ ಅಪಾಯದಿಂದ ನೀವು ಮತ್ತು ನಿಮ್ಮ ಮನೆಯ ಹಿರಿಯರು ಸುರಕ್ಷಿತವಾಗಲಿದ್ದೀರಿ.

ನಿಮ್ಮ ಶ್ರಮದ ಹಣ ನಿಮ್ಮ ಕೈತಪ್ಪದಂತೆ ನೋಡಿಕೊಳ್ಳಲು ಅಧಿಕೃತ ಒಟಿಪಿಗಳನ್ನಷ್ಟೇ ನಿಮ್ಮ ಮೊಬೈಲ್‌ಗೆ ಕಳುಹಿಸಲು ಟ್ರಾಯ್‌ ಅನುಸರಿಸುತ್ತಿರುವ ವಿಧಾನವಿದು. ಟ್ರಾಯ್‌ OTP SMS ಮೂಲಕ ನಡೆಯುತ್ತಿರುವ SPAM ಹಾಗೂ ಅಕ್ರಮ ಹಣ ವರ್ಗಾವಣೆಯನ್ನು ತಪ್ಪಿಸುವ ಉದ್ದೇಶದಿಂದ ಒಟಿಪಿಗಳನ್ನು ಪರಿಶೀಲನೆ ಮಾಡಲು ಮುಂದಾಗಿದೆ. ಇದರಿಂದ ಒಟಿಪಿ ಬರುವುದು ತುಸು ತಡವಾದರೂ, ಹಣ ಸುರಕ್ಷಿತವಾಗಿರಲಿದೆ. ಹ್ಯಾಕರ್‌ಗಳು ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎನ್ನುವುದನ್ನು ಪರಿಶೀಲಿಸುವುದನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟೆಲಿಕಾಂ ಇಲಾಖೆಯು ಇದಿನಿಂದ ಈ ಪದ್ಧತಿಯನ್ನು ಜಾರಿ ಮಾಡುತ್ತಿದೆ. ಈ ರೀತಿ ವಿಳಂಬವಾಗಿ ಒಟಿಪಿಗಳನ್ನು ಕಳುಹಿಸುವುದರಿಂದ ಸ್ಪ್ಯಾಮ್ ಪೋನ್‌ ಕರೆಗಳು ಮತ್ತು ಅಕ್ರಮ (ವಂಚನೆ) ಆನ್‌ಲೈನ್ ಹಣಕಾಸು ವಹಿವಾಟು ಪರಿಶೀಲನೆ ಸುಲಭವಾಗಲಿದೆ.

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಹೊಸ ಕಾನೂನನ್ನು ಜಾರಿ ಮಾಡಿದ್ದು, ಇದು ಯಾವ ರೀತಿ ಕಾರ್ಯ ನಿರ್ವಹಿಸಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಟ್ರಾಯ್‌ನ ಹೊಸ ನಿಯಮದಿಂದ ಈಗಾಗಲೇ ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಲಿಂಕ್‌ಗಳು ಮತ್ತು ಫೋನ್ ಸಂಖ್ಯೆಗಳಿಂದ ನಿಮಗೆ ಒಟಿಪಿ ಬರುವುದು ತಪ್ಪಲಿದೆ. ಈ ರೀತಿ ಒಟಿಪಿ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಯಾವುದಾದರೂ ವಂಚಕರ ಜಾಲವಿದ್ದರೆ, ಅದು ನಿಮ್ಮ ವರೆಗೂ ಬರದಂತೆ ತಡೆಯಲಾಗುತ್ತದೆ. ವಂಚನೆ ಮಾದರಿಯ URL ಹಾಗೂ OTT ಲಿಂಕ್‌ಗಳು ಹಾಗೂ APK ಫೈಲ್‌ಗಳು ನಿಮ್ಮ ಮೊಬೈಲ್‌ ಮೆಸೇಜ್‌ ಹಾಗೂ ವಾಟ್ಸ್‌ ಆಯಪ್‌ ಗೆ ಬರದಂತೆ ಪೂರ್ವ ಹಂತದಲ್ಲೇ ತಡೆಯಲಾಗುತ್ತದೆ. ಈಗಾಗಲೇ ಟ್ರಾಯ್‌ ಟೆಲಿಕಾಂ ಆಪರೇಟರ್‌ಗಳಿಗೆ ಈ ಸಂಬಂಧ ನಿರ್ದೇಶನ ನೀಡಿದ್ದು, ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಸೇವೆಗಳಿಂದ ಸಾರ್ವಜನಿಕರಿಗೆ ಒಟಿಪಿ ಸಂದೇಶ ಹೋಗದಂತೆ ತಡೆಯಲು ನಿರ್ದೇಶನವನ್ನೂ ನೀಡಿದೆ.

ಬ್ಯಾಂಕ್‌ಗಳಿಗೂ ಸೂಚನೆ

ಒಟಿಪಿ ಬದಲಾವಣೆ ಸಂಬಂಧ ಟ್ರಾಯ್‌ ಬ್ಯಾಂಕ್‌ಗಳಿಗೆ ಹಾಗೂ ವಿವಿಧ ವೆಬ್‌ಸೈಟ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಟ್ರಾಯ್‌ ಈಗಾಗಲೇ ಬ್ಯಾಂಕಿಂಗ್‌ನಲ್ಲೂ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದೆ. OTP ಕಳುಹಿಸಲು ಬ್ಯಾಂಕ್‌ಗಳು ನಿರ್ದಿಷ್ಟವಾಗಿ ಬಳಸುವ ಸಂಖ್ಯೆಯ ಮೇಲೆ ನಿರ್ಬಂಧವಿಧಿಸಲಾಗಿದೆ.

ಕಪ್ಪು ಪಟ್ಟಿ - ಬಿಳಿ ಪಟ್ಟಿ ಎಂದು ವರ್ಗಾವಣೆ

ಟ್ರಾಯ್‌ ಒಟಿಪಿ ಸ್ಕ್ಯಾಮ್‌ಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಅದೇ ಅಧಿಕೃತ ಸಂಖ್ಯೆಗಳನ್ನು ಶ್ವೇತ ಪಟ್ಟಿಗೂ ಅನಧಿಕೃತ ಸಂಖ್ಯೆಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು. ಈಗಾಗಲೇ ಕಪ್ಪುಪಟ್ಟಿಗೆ ಸೇರಿರುವ ಸೇವೆ, ಸಂಖ್ಯೆಗಳಿಂದ ಕಳುಹಿಸಲಾದ OTT ಯನ್ನು ಸ್ಪ್ಯಾಮ್ ಎಂದು ಪರಿಗಣಿಸಿ, ಬ್ಲ್ಯಾಕ್‌ ಲಿಸ್ಟ್‌ ಮಾಡಲಾಗುತ್ತದೆ. ನಿಮ್ಮ ಮೊಬೈಲ್‌ ಖಾತೆಗೆ ಬರುವ OTP ಸಂಖ್ಯೆಗಳು ಮತ್ತು ಲಿಂಕ್‌ಗಳನ್ನು ಪರಿಶೀಲಿಸುವ ಉದ್ದೇಶಿದಂದ ಸ್ಕ್ಯಾನ್ ಮಾಡಲಾಗುತ್ತದೆ. ಈ ಕಾರಣದಿಂದ OTP ಬರುವುದು ಸಾಮಾನ್ಯ ಅವಧಿಗಿಂತ ತುಸು ತಡವಾಗಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries