ನವದೆಹಲಿ: ಕನ್ನಡಕಕ್ಕೆ ಪರ್ಯಾಯವೆಂದು ಪ್ರಚಾರ ಮಾಡಿದ್ದ ENTOD Pharmaceuticals Ltd ಸಂಸ್ಥೆಯ PresVu ಕಣ್ಣಿನ ಲಸಿಕೆಯ ತಯಾರಿ, ಮಾರಾಟಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI) ತಡೆ ನೀಡಿದೆ.
ಹೌದು.. ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಉತ್ಪಾದಿಸುತ್ತಿರುವ PresVu ಕಣ್ಣಿನ ಲಸಿಕೆ ತಯಾರಿ ಮತ್ತು ಮಾರಾಟಕ್ಕೆ ನೀಡಿದ್ದ ಅನುಮತಿಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅಮಾನತುಗೊಳಿಸಿದೆ.
ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ 'PresVu' ಲಸಿಕೆಯ ಬಗ್ಗೆ ಅನಧಿಕೃತ ಪ್ರಚಾರವನ್ನು ಮಾಡಿದೆಯೆಂದು ಮುಂದಿನ ಆದೇಶದವರೆಗೆ ಲಸಿಕೆಯ ತಯಾರಿ ಮತ್ತು ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ.
ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿನ ಲಸಿಕೆ ಬಗ್ಗೆ ಅನಧಿಕೃತ ಪ್ರಚಾರವು ಅಸುರಕ್ಷಿತ ಬಳಕೆಗೆ ಕಾರಣವಾಗುತ್ತದೆ ಎಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹೇಳಿದೆ.
ಡಿಸಿಜಿಐ ಸ್ಪಷ್ಟನೆ
ಇದೇ ವೇಳೆ ಸಂಸ್ಥೆಗೆ ನೀಡಿರುವ ಅನುಮತಿ ವಿಚಾರವಾಗಿಯೂ ಸ್ಪಷ್ಟನೆ ನೀಡಿರುವ ಡಿಸಿಜಿಐ, 'ಈ ರೀತಿಯ ಪ್ರಚಾರವು OTC(ಪ್ರಿಸ್ಕ್ರಿಪ್ಷನ್ ಇಲ್ಲದೆ ಬಳಸಬಹುದಾದ ಔಷಧ) ಔಷಧಿಗಳನ್ನು ಬಳಕೆ ಮಾಡುವಂತೆ ʼಪ್ರೆಸ್‌ವುʼ ಲಸಿಕೆಯ ಬಳಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಆದರೆ ಈ ಔಷಧವನ್ನು ಪ್ರಿಸ್ಕ್ರಿಪ್ಷನ್ ಔಷಧವಾಗಿ ಮಾತ್ರ ಅನುಮೋದಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಅಮಾನತಿಗೆ ಕಾರಣವೇನು?
ಕಣ್ಣಿಗೆ ಸಂಬಂಧಿಸಿದ ಸಮಸ್ಯೆಯಾದ ಪ್ರೆಸ್ಬಯೋಪಿಯಾ ಹೊಂದಿರುವ ವ್ಯಕ್ತಿಗಳಿಗೆ PresVu ಕಣ್ಣಿನ ಲಸಿಕೆ ನೀಡುವುದರಿಂದ ಕನ್ನಡಕಗಳ ಮೇಲಿನ ಅವಲಂಬನೆ ಬೇಕಿಲ್ಲ ಎಂದು ಕಂಪನಿ ಜಾಹೀರಾತುಗಳಲ್ಲಿ ಹೇಳಿಕೊಂಡಿತ್ತು. ಆದರೆ ಡಿಸಿಜಿಐ ಹೇಳಿಕೆಯಂತೆ ಈ ಔಷಧಿಯನ್ನು ಪ್ರಿಸ್ಕ್ರಿಪ್ಷನ್ ಅಥವಾ ವೈದ್ಯರ ಚೀಟಿ ಇಲ್ಲದೇ ಪಡೆಯುವ ಔಷಧಿಯಾಗಿ ಅನುಮತಿ ನೀಡಿಲ್ಲ ಎಂದು ಹೇಳಿದೆ.
ಅಲ್ಲದೆ ಈ ರೀತಿಯ ಪ್ರಚಾರವು OTC(ಪ್ರಿಸ್ಕ್ರಿಪ್ಷನ್ ಇಲ್ಲದೆ ಬಳಸಬಹುದಾದ ಔಷಧ) ಔಷಧಿಗಳನ್ನು ಬಳಕೆ ಮಾಡುವಂತೆ 'ಪ್ರೆಸ್‌ವು' ಲಸಿಕೆಯ ಬಳಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಆದರೆ ಈ ಔಷಧವನ್ನು ಪ್ರಿಸ್ಕ್ರಿಪ್ಷನ್ ಔಷಧವಾಗಿ ಮಾತ್ರ ಅನುಮೋದಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.