HEALTH TIPS

SBI ನಿಂದ ನಿಶ್ಚಿತ ಠೇವಣಿ ಆಕರ್ಷಿಸಲು ನೂತನ ಯೋಜನೆ!

            ವದೆಹಲಿ: ಠೇವಣಿದಾರರನ್ನು ಆಕರ್ಷಿಸುವ ಉದ್ದೇಶದಿಂದ ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್​ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮರುಕಳಿಸುವ ಠೇವಣಿ ಮತ್ತು ವ್ಯವಸ್ಥಿತ ಹೂಡಿಕೆ ಯೋಜನೆಗಳ (SIP)ನ್ನು ಒಳಗೊಂಡಂತೆ ನವೀನ ಹಣಕಾಸು ಸ್ಕೀಂಗಳನ್ನು ಪರಿಚಯಿಸಲು ಯೋಜಿಸಿದೆ.

          ಎಸ್‌ಬಿಐ ಅಧ್ಯಕ್ಷ ಸಿ.ಎಸ್. ಶೆಟ್ಟಿ ಗ್ರಾಹಕರ ಅಗತ್ಯತೆ ಪೂರೈಸುವ ಸಲುವಾಗಿ ಇದು ಅತ್ಯಗತ್ಯ ಎಂದು ಒತ್ತಿ ಹೇಳಿದರು.

         ಗ್ರಾಹಕರು ಭದ್ರತೆ ಮತ್ತು ಹೆಚ್ಚು ಲಾಭದಾಯಕ ಎಲ್ಲಿ? ಯಾವ ಕಡೆ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ವೈವಿಧ್ಯಮಯ ಹೂಡಿಕೆ ಆಯ್ಕೆಗಳನ್ನು ಹುಡುಕುತ್ತಿರುವ ಗ್ರಾಹಕರ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

           ಆರ್ಥಿಕತೆ ಸುಧಾರಿಸುತ್ತಿರುವುದರಿಂದ ಗ್ರಾಹಕರು ಆಸ್ತಿ ಹಂಚಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ತಮ್ಮ ಹೂಡಿಕೆಯಲ್ಲಿ ಮೌಲ್ಯವನ್ನು ಬಯಸುತ್ತಿದ್ದಾರೆ. ಸಾಮಾನ್ಯವಾಗಿ ಯಾರೂ ತಮ್ಮ ಸಂಪೂರ್ಣ ಹಣವನ್ನು ಅಪಾಯಕಾರಿ ರೀತಿಯಲ್ಲಿ ಹೂಡಿಕೆ ಮಾಡುವುದಿಲ್ಲ. ಪರ್ಯಾಯ ಬ್ಯಾಂಕಿಂಗ್ ಯೋಜನೆಗಳು ಅವರಿಗೆ ಯಾವಾಗಲೂ ಉತ್ತಮ ಆಯ್ಕೆಯಾಗಿದೆ. ಅದಕ್ಕಾಗಿಯೇ ಅವರನ್ನು ಆಕರ್ಷಿಸಲು ಹೊಸ ಸ್ಕೀಂಗಳು ಲಭ್ಯವಾಗಲಿವೆ ಎಂದಿದ್ದಾರೆ.

            ಪುನರಾವರ್ತಿತ ಠೇವಣಿಗಳಂತಹ ಸಾಂಪ್ರದಾಯಿಕ ಬ್ಯಾಂಕಿಂಗ್ ಸ್ಕೀಂಗಳನ್ನು ಹೆಚ್ಚು ಆಕರ್ಷಕವಾಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸ್ಥಿರ ಠೇವಣಿ, ಮರುಕಳಿಸುವ ಠೇವಣಿ ಮತ್ತು ಎಸ್‌ಐಪಿ ಹೂಡಿಕೆಗಳ ವೈಶಿಷ್ಟ್ಯಗಳನ್ನು ಸಂಯೋಜಿಸಿ ಕಾಂಬೊ ಸ್ಕೀಂ ತರಲು ಯೋಚಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

          ಹೊಸ ಸ್ಕೀಂಗಳನ್ನು ಡಿಜಿಟಲ್ ಮೂಲಕ ಪ್ರವೇಶಿಸುವ ಅವಕಾಶವನ್ನೂ ನೀಡಲಾಗುವುದು. ಇವು ಮುಖ್ಯವಾಗಿ ಯುವ ಗ್ರಾಹಕರು ಮತ್ತು ಜನರೇಷನ್ ಜೆ ಗ್ರಾಹಕರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

         ಇನ್ನು ಠೇವಣಿ ಕ್ರೋಢೀಕರಣದಲ್ಲಿ ಗ್ರಾಹಕ ಸೇವೆ ಮತ್ತು ಬಡ್ಡಿದರಗಳು ಪ್ರಮುಖ ಪಾತ್ರವಹಿಸುತ್ತವೆ. ಆದಾಗ್ಯೂ, ಬಡ್ಡಿದರದ ಯುದ್ಧದಲ್ಲಿ ಇತರ ಬ್ಯಾಂಕುಗಳೊಂದಿಗೆ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. ಎಸ್‌ಬಿಐ ಮುಖ್ಯವಾಗಿ ಸಮತೋಲಿತ ಬಡ್ಡಿದರಗಳು ಮತ್ತು ಉತ್ತಮ ಗ್ರಾಹಕ ಸೇವೆಯನ್ನು ಒದಗಿಸುವತ್ತ ಗಮನಹರಿಸಿದೆ ಎಂದು ಅವರು ಹೇಳಿದ್ದಾರೆ..

         ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ಸಚಿವಾಲಯವು ಠೇವಣಿಗಳನ್ನು ಆಕರ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಬ್ಯಾಂಕ್‌ಗಳಿಗೆ ಸಲಹೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries