HEALTH TIPS

ಹೇಮ ಕಮಿಟಿ ವರದಿ: ದೂರು ನೀಡಿದವರ ಜತೆ ಮುಖಾಮುಖಿ ಭೇಟಿಗೆ ಸಜ್ಜಾದ SIT

 ತಿರುವನಂತಪುರ: 'ಕಾಸ್ಟಿಂಗ್ ಕೌಚ್'​ ಎಂಬ ಪದ ಅತೀ ಹೆಚ್ಚಾಗಿ ಕೇಳಿಬಂದಿರುವುದು ಭಾರತೀಯ ಚಿತ್ರರಂಗದಲ್ಲಿಯೇ ಎಂದರೆ ಖಂಡಿತ ತಪ್ಪಾಗಲಾರದು. ಸಿನಿ ಇಂಡಸ್ಟ್ರಿಯಲ್ಲಿ ನಾನೊಬ್ಬಳು ದೊಡ್ಡ ಕಲಾವಿದೆ ಆಗಬೇಕು, ಉನ್ನತ ಮಟ್ಟದಲ್ಲಿ ಬೆಳೆಯಬೇಕು, ಪ್ರೇಕ್ಷಕರು ಗುರುತಿಸುವಂತ ಪ್ರತಿಭೆಯಾಗಿ ಹೊರಹೊಮ್ಮಬೇಕು ಎಂಬ ಅಪಾರ ಕನಸ ಹೊತ್ತು ಚಿತ್ರರಂಗಕ್ಕೆ ಕಾಲಿಡುವ ನಟಿ ಮಣಿಯರು ತಮ್ಮ ಊಹೆಗೂ ಮೀರಿದ ಘಟನೆಗಳನ್ನು ಅನುಭವಿಸಿದಾಗ ಅಥವಾ ಅದರ ಬಗ್ಗೆ ಕೇಳಿದಾಗ ಒಂದು ನಿಮಿಷ ನಿಂತಲ್ಲೇ ಕುಸಿದು ಹೋಗುತ್ತಾರೆ.

ತಾವು ಕಂಡ ಕನಸುಗಳನ್ನು ನುಚ್ಚುನೂರು ಮಾಡಿಕೊಳ್ಳುತ್ತಾರೆ. ಇಂತಹ ವಿಚಾರಗಳು ಆಗಾಗ್ಗೆ ಬಣ್ಣದ ಲೋಕದಲ್ಲಿ ಕೇಳಿಬರುತ್ತಿರುತ್ತವೆ. ಸಿನಿರಂಗದಲ್ಲಿ ಅವಕಾಶ ಪಡೆಯಬೇಕು ಎಂದರೆ ಮಂಚ ಹತ್ತಲೇಬೇಕು, ಮುತ್ತು ಕೊಡಿಸಿಕೊಳ್ಳಲೇಬೇಕು ಎಂಬ ನಟಿಯರ ಆರೋಪಗಳು ನಿಜಕ್ಕೂ ಭಾರೀ ಅಚ್ಚರಿಗೆ ದೂಡುತ್ತದೆ.

ಅದರಲ್ಲೂ ಇತ್ತೀಚೆಗಷ್ಟೇ ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ ಅನೇಕ ಸ್ಟಾರ್​ ನಟಿಯರು ತಮಗಾದ ಕಾಸ್ಟಿಂಗ್ ಕೌಚ್​ ಅನುಭವಗಳ ಬಗ್ಗೆ ಮುಕ್ತವಾಗಿ ಕ್ಯಾಮರಾ ಮುಂದೆ ಮಾತನಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಯಾರಿಂದ ತಾವು ಇಂತಹ ಕೆಟ್ಟ ಪರಿಸ್ಥಿತಿ ಎದುರಿಸಿದೆವು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಚಿತ್ರರಂಗದ ಕರಾಳ ಮುಖವನ್ನು ಬಟಾಬಯಲು ಮಾಡ್ತಿದ್ದಾರೆ. ಸದ್ಯ ಈ ವಿಚಾರದಲ್ಲಿ ಹಲವಾರು ನಟಿಮಣಿಯರು ಈಗಾಗಲೇ ದೂರು ನೀಡಿದ್ದು, ತಮಗಾದ ನೋವು ಬೇರಾರಿಗೂ ಆಗಬಾರದು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಕೇರಳ ಹೈಕೋರ್ಟ್​ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, 4 ವರ್ಷಗಳಿಂದ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿತ್ತು. ಸದ್ಯ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಎಸ್​ಐಟಿ, ದೂರು ನೀಡಿದವರ ಹೇಳಿಕೆ ಪಡೆಯಲು ಮುಂದಾಗಿದೆ.

ಹೇಮಾ ಸಮಿತಿ ವರದಿಯ ಸಂಪೂರ್ಣ ಮಾಹಿತಿಯನ್ನು ಪಡೆದಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯಲ್ಲಿ ನಿರ್ಣಾಯಕ ಹೆಜ್ಜೆ ಇಟ್ಟಿದೆ. ಹೇಮಾ ಸಮಿತಿಗೆ ಹೇಳಿಕೆ ನೀಡಿದ ವ್ಯಕ್ತಿಗಳನ್ನು ನೇರವಾಗಿ ಭೇಟಿ ಮಾಡಲು ತಂಡವು ಸಜ್ಜಾಗಿದೆ. ಮುಂದಿನ 10 ದಿನಗಳಲ್ಲಿ ಮುಖಾಮುಖಿ ಭೇಟಿ ಮೂಲಕ ಹೇಳಿಕೆಗಳನ್ನು ಪಡೆಯಲಿರುವ ಎಸ್​ಐಟಿ, ಓಣಂ ಹಬ್ಬದ ನಂತರ ಈ ವಿಷಯದ ನಿರ್ಧಾರವನ್ನು ಜಾರಿಗೆ ತರಲು ಎದುರುನೋಡುತ್ತಿದೆ ಎಂದು ವರದಿಯಾಗಿದೆ.

ನಿಖಾ ತಂಡವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ತಂಡ ದೂರು ನೀಡಿದವರನ್ನು ಭೇಟಿಯಾಗಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ. ಹೇಮಾ ಸಮಿತಿಯು ಲೈಂಗಿಕ ದೌರ್ಜನ್ಯ ಸೇರಿದಂತೆ ಮಲಯಾಳಂ ಚಿತ್ರರಂಗದ ವಿವಿಧ ಸಮಸ್ಯೆಗಳ ಕುರಿತು ಈಗಾಗಲೇ 50 ಮಂದಿಯಿಂದ ಹೇಳಿಕೆಗಳನ್ನು ಸ್ವೀಕರಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries