ನವದೆಹಲಿ: ಮಹಾತ್ಮಾ ಗಾಂಧಿ ಸ್ಮಾರಕವಿರುವ ರಾಜ್‌ಘಾಟ್‌ನಲ್ಲಿ ಯುಎಇಯ ರಾಜಕುಮಾರ ಖಲೀದ್ ಬಿನ್ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಅವರು ಗಿಡ ನೆಟ್ಟರು. ಈ ಮೂಲಕ ರಾಜ್‌ಘಾಟ್‌ನಲ್ಲಿ ಗಿಡನೆಟ್ಟ ಯುಎಇಯ ಮೂರನೇ ತಲೆಮಾರಿನ ರಾಜಕುಮಾರ ಎನಿಸಿಕೊಂಡರು.
ನವದೆಹಲಿ: ಮಹಾತ್ಮಾ ಗಾಂಧಿ ಸ್ಮಾರಕವಿರುವ ರಾಜ್‌ಘಾಟ್‌ನಲ್ಲಿ ಯುಎಇಯ ರಾಜಕುಮಾರ ಖಲೀದ್ ಬಿನ್ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಅವರು ಗಿಡ ನೆಟ್ಟರು. ಈ ಮೂಲಕ ರಾಜ್‌ಘಾಟ್‌ನಲ್ಲಿ ಗಿಡನೆಟ್ಟ ಯುಎಇಯ ಮೂರನೇ ತಲೆಮಾರಿನ ರಾಜಕುಮಾರ ಎನಿಸಿಕೊಂಡರು.
1992ರಲ್ಲಿ ಯುಎಇಯ ಮೊದಲ ಅಧ್ಯಕ್ಷ ಶೇಖ್ ಝಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ರಾಜ್‌ಘಾಟ್‌ನಲ್ಲಿ ಕ್ಯಾಸಿಯಾ ಫಿಸ್ಟ್ಯೂಲಾ (ಕಕ್ಕೆ ಗಿಡ)ವನ್ನು ನೆಟ್ಟಿದ್ದರು.
ಭಾರತ ಮತ್ತು ಯುಎಇಯ ನಡುವಿನ ಸಂಬಂಧವು, ಗಿಡದ ಆಳದಲ್ಲಿರುವ ಬೇರಿನಂತೆ ಹಾಗೂ ಬೆಳೆಯುವ ಗಿಡದಂತೆ ಎಂದು ಯುಎಇ ಬಣ್ಣಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 'ಮಹಾತ್ಮಾ ಗಾಂಧಿ ಅವರ ಸಾರ್ವತ್ರಿಕ ಬೋಧನೆ ಮತ್ತು ಭಾರತ-ಯುಎಇ ನಡುವಿನ ಸಂಬಂಧಗಳ ಗುರುತಾಗಿ ಮೂರನೇ ತಲೆಮಾರಿನ ರಾಜಕುನಾರ ಗಿಡವನ್ನು ನೆಟ್ಟರು' ಎಂದು ಬರೆದುಕೊಂಡಿದ್ದಾರೆ.