HEALTH TIPS

World Coconut Day 2024 : ತೆಂಗಿನಕಾಯಿ ಸೇವನೆಯಿಂದ ಆರೋಗ್ಯದಲ್ಲಾಗುತ್ತೆ ಮ್ಯಾಜಿಕ್

 ಭಾರತೀಯರ ಅಡುಗೆಯು ತೆಂಗಿನಕಾಯಿಯಿಲ್ಲದೇ ರುಚಿಸುವುದೇ ಇಲ್ಲ. ಪೂಜೆಯಿಂದ ಹಿಡಿದು ಆಹಾರ ತಯಾರಿಸುವವರೆಗೆ ಹೀಗೆ ಹಲವಾರು ಬಗೆಯಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಆದರೆ ಈ ತೆಂಗಿನ ಕಾಯಿಗೂ ಒಂದು ವಿಶೇಷ ದಿನವಿದ್ದು, ಸೆಪ್ಟೆಂಬರ್ 2 ರಂದು ವಿಶ್ವ ತೆಂಗು ದಿನವೆಂದು ಆಚರಿಸಲಾಗುತ್ತದೆ.

ಬಹುಪಯೋಗಿಯಾಗಿರುವ ತೆಂಗಿನ ಕಾಯಿಯ ಮಹತ್ವವನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಲ್ಪವೃಕ್ಷ ಎಂದು ಕರೆಯಲಾ ಗುವ ತೆಂಗು ಬಹುಪಯೋಗಿಯಾಗಿದ್ದು, ಈ ಮರದ ಪ್ರತಿಯೊಂದು ಭಾಗವು ಉಪಯೋಗಕ್ಕೆ ಬರುತ್ತದೆ ಅದಲ್ಲದೇ, ಭಾರತೀಯರಿಗೆ ಅಚ್ಚುಮೆಚ್ಚಾಗಿದ್ದು ತೆಂಗು ಇಲ್ಲದೇ ಯಾವ ಅಡುಗೆಯು ರುಚಿಸುವುದಿಲ್ಲ. ಪ್ರಪಂಚದಾದ್ಯಂತ ವಿವಿಧ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಸುವ ತೆಂಗಿನಕಾಯಿ ಆರೋಗ್ಯಕ್ಕೂ ಉತ್ತಮವಾಗಿದ್ದು ಇದರ ಮಹತ್ವ ತಿಳಿಸಲು ಸೆಪ್ಟೆಂಬರ್ 2 ರಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ತೆಂಗು ದಿನದ ಇತಿಹಾಸ ಹಾಗೂ ಮಹತ್ವ

ಏಷ್ಯನ್‌ ಅಂಡ್‌ ಪೆಸಿಫಿಕ್‌ ಕಮ್ಯೂನಿಟಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಏಷ್ಯಾದ ದೇಶಗಳಲ್ಲಿ ತೆಂಗಿನಕಾಯಿ ಬೆಳೆ ಉತ್ಪಾದನೆ, ಮಾರಾಟ ಮತ್ತು ರಫ್ತುಗಳನ್ನು ಪ್ರೋತ್ಸಾಹಿಸುವ ಸಲುವಾಗಿ 1969ರಲ್ಲಿ ಸ್ಥಾಪಿಸಲಾಯಿತು. 2009ರಲ್ಲಿ ಎಪಿಸಿಸಿ ವಿಶ್ವ ತೆಂಗು ದಿನದ ಆಚರಣೆಯನ್ನು ಆರಂಭಿಸಿತು. ಈ ದಿನವನ್ನು ಭಾರತ, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌, ಥಾಯ್ಲೆಂಡ್‌, ವಿಯೆಟ್ನಾಂ ಸೇರಿದಂತೆ ಹಲವು ದೇಶ ಗಳು ಆಚರಿಸುತ್ತವೆ ತೆಂಗಿನಕಾಯಿ ಸೇವನೆಯ ಪ್ರಯೋಜನಗಳು ಹಾಗೂ ಮಹತ್ವವನ್ನು ಸಾರುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ಜಾಗೃತಿ ಮೂಡಿಸುವ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ.

ತೆಂಗಿನಕಾಯಿಯ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು

  • ತೆಂಗಿನಕಾಯಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಹಲವಾರು ಪ್ರಮುಖ ಖನಿಜಗಳು ಮತ್ತು ಸಣ್ಣ ಪ್ರಮಾಣದ ಬಿ ಜೀವಸತ್ವಗಳು ಇವೆ. ತೆಂಗಿನಕಾಯಿಯಲ್ಲಿ ಮ್ಯಾಂಗನೀಸ್ ಅಧಿಕವಾಗಿದ್ದು, ಇದು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಅದಲ್ಲದೇ ಇದರಲ್ಲಿರುವ ನಾರಿನಾಂಶವು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
  • ಒಣ ಕೊಬ್ಬರಿಯಿಂದ ತಯಾರಿಸಿದ ಶುದ್ಧ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಈ ತೆಂಗಿನೆಣ್ಣೆಯ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ತೆಂಗಿನಕಾಯಿಯಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಹಾಗೂ ಫೈಬರ್ ಮತ್ತು ಕೊಬ್ಬಿನ ಅಂಶಗಳು ಅಧಿಕವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಿ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
  • ತೆಂಗಿನಕಾಯಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಸ್​ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಅದಲ್ಲದೇ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವನ್ನು ಹೊಂದಿದ್ದು, ಕೋಶಗಳನ್ನು ಹಾನಿಯಿಂದ ರಕ್ಷಿಸಿ ಆರೋಗ್ಯ ಸಮಸ್ಯೆ ಬಾರದಂತೆ ತಡೆಯುತ್ತದೆ.
  • ನಿಯಮಿತವಾದ ತೆಂಗಿನ ಕಾಯಿ ಸೇವನೆಯು ಒಣ ಚರ್ಮ ಮತ್ತು ಕೂದಲು ಉದುರುವುದು ಹೀಗೆ ಇನ್ನಿತ್ತರ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಚರ್ಮದಲ್ಲಿನ ತೇವಾಂಶ ಹೆಚ್ಚಿಸುವುದಲ್ಲದೆ ಚರ್ಮದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries