ನವದೆಹಲಿ: ಪಿಎಂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಕೃಷ್ಣೋನ್ನತಿ ಯೋಜನೆಯಡಿ ₹1 ಲಕ್ಷ ಕೋಟಿ ವೆಚ್ಚ ಮಾಡಲು ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.
ನವದೆಹಲಿ: ಪಿಎಂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಕೃಷ್ಣೋನ್ನತಿ ಯೋಜನೆಯಡಿ ₹1 ಲಕ್ಷ ಕೋಟಿ ವೆಚ್ಚ ಮಾಡಲು ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.
ಸುಸ್ಥಿರ ಕೃಷಿಗೆ ಉತ್ತೇಜನ ಹಾಗೂ ದೇಶದ ಆಹಾರ ಭದ್ರತೆಗೆ ಒತ್ತು ನೀಡುವುದು ಈ ಯೋಜನೆಗಳ ಉದ್ದೇಶವಾಗಿದೆ.
ಎಣ್ಣೆಕಾಳು ಉತ್ಪಾದನೆಗೆ ಒತ್ತು
ರಾಷ್ಟ್ರೀಯ ಖಾದ್ಯ ತೈಲಗಳು ಮತ್ತು ಎಣ್ಣೆಕಾಳುಗಳ ಮಿಷನ್‌ನಡಿ ₹10,103 ಕೋಟಿ ವೆಚ್ಚ ಮಾಡುವುದಕ್ಕೂ ಸಂಪುಟ ಒಪ್ಪಿಗೆ ಸೂಚಿಸಿದೆ.
ದೇಶೀಯ ಬೇಡಿಕೆಗೆ ಅನುಗುಣವಾಗಿ ಸರ್ಕಾರವು ಶೇ 50ರಷ್ಟಕ್ಕೂ ಹೆಚ್ಚು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಮುಂದಿನ 7 ವರ್ಷದಲ್ಲಿ ದೇಶೀಯವಾಗಿ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಈ ಮಿಷನ್ ರೂಪಿಸಲಾಗಿದೆ.
ದೇಶದಲ್ಲಿ 2022-23ರಲ್ಲಿ 39 ದಶಲಕ್ಷ ಟನ್ ಎಣ್ಣೆಕಾಳುಗಳ ಉತ್ಪಾದನೆಯಾಗಿದೆ. 2030-31ರ ವೇಳೆಗೆ 69.7 ದಶಲಕ್ಷ ಟನ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಎಣ್ಣೆಕಾಳುಗಳ ಉತ್ಪಾದನಾ ಪ್ರದೇಶವನ್ನು ಹೆಚ್ಚುವರಿಯಾಗಿ 40 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.