HEALTH TIPS

1,000 ಸಿಟ್-ಅಪ್‌ ಮಾಡುವಂತೆ ವಿದ್ಯಾರ್ಥಿಗೆ ಶಿಕ್ಷೆ ವಿಧಿಸಿದ ಶಿಕ್ಷಕಿ! ಶಾಶ್ವತವಾಗಿ ಕಾಲು ಕಳೆದುಕೊಂಡ ಬಾಲಕ..

        ಚೀನಾಶಿಕ್ಷಕರು ಮಕ್ಕಳನ್ನು ಬೈಯುವ ಮೂಲಕ ಮತ್ತು ಕೆಲವೊಮ್ಮೆ ಹೊಡೆಯುವ ಮೂಲಕ ಮಕ್ಕಳ ತಪ್ಪುಗಳನ್ನು ತಿದ್ದಲು ಪ್ರಯತ್ನಿಸುತ್ತಾರೆ. ಆದರೆ ಚೀನಾದ ಶಾಲೆಯಲ್ಲಿ, ಬೇಸಿಗೆ ಶಿಬಿರದಲ್ಲಿ ಶಿಕ್ಷಕರೊಬ್ಬರು ಮಗುವಿಗೆ ಶಿಕ್ಷೆಯನ್ನು ( Teacher punishes Boy ) ನೀಡಿದ್ದಾರೆ.

        ಇದರಿಂದ ವಿದ್ಯಾರ್ಥಿನಿ ಶಾಶ್ವತವಾಗಿ ( lifetime disability ) ತನ್ನ ಕಾಲ ಮೇಲೆ ನಿಲ್ಲಲು ಸಾಧ್ಯವಿಲ್ಲದ ಪರಿಸ್ಥಿತಿ ತಲುಪಿದ್ದಾನೆ. ಚೀನಾದ ( China ) ಶಾನ್‌ಡಾಂಗ್ ಪ್ರಾಂತ್ಯದ ಮಿಡ್ಲ್ ಸ್ಕೂಲ್‌ನಲ್ಲಿ ನಡೆದಿರುವ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

         ಶಾಲಾ ಶಿಕ್ಷಕನು 13 ವರ್ಷದ ವಿದ್ಯಾರ್ಥಿಯನ್ನು ಬೇಸಿಗೆ ಶಿಬಿರದಲ್ಲಿ 1,000 ಸಿಟ್-ಅಪ್‌ಗಳನ್ನು ಮಾಡಲು ಶಿಕ್ಷಿಸಿದನು. 200 ಸಿಟ್-ಅಪ್‌ಗಳನ್ನು ಮಾಡಿದ ನಂತರ, ಹುಡುಗ ನೋವಿನಿಂದ ಬಳಲ ತೊಡಗಿದನು. ಆದರೂ ಶಿಕ್ಷಕರು ಸುಮ್ಮನಿರಲಿಲ್ಲ. ಆತನಿಗೆ ಶಿಕ್ಷೆಯನ್ನು ಮುಂದುವರೆಸಿದ್ದಾಳೆ. ಶಿಕ್ಷಕಿ ವಿಧಿಸಿದ ಶಿಕ್ಷೆಯಿಂದ ವಿದ್ಯಾರ್ಥಿಗೆ ಕಾಲಿಗೆ ಅಸಹನೀಯ ನೋವು ಉಂಟಾಗಿದೆ. ಮೊದಲಿಗೆ ಸ್ನಾಯು ನೋವು ಎಂದು ಭಾವಿಸಿ ಬಾಲಕನಿಗೆ ಔಷಧ ನೀಡಲಾಗಿತ್ತು.

            ವಿದ್ಯಾರ್ಥಿಯನ್ನು ಪರೀಕ್ಷೆ ಮಾಡಿಸಿದ ವೈದ್ಯರು ಮಾತನಾಡಿ, ಈತನಿಗೆ ದೈಹಿಕ ಪರಿಶ್ರಮದಿಂದ ಉಂಟಾಗುವ ಗಂಭೀರ ಕಾಯಿಲೆಯಾದ ರಾಬ್ಡೋಮಿಯೊಲಿಸಿಸ್ ಬಂದಿದೆ. ಇದು ಸ್ನಾಯುಗಳಿಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ. ಇದು ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವಿದ್ಯಾರ್ಥಿ ಶಾಶ್ವತ ಅಂಗವಿಕಲನಾಗಿದ್ದಾನೆ. ಆ ಹುಡುಗ ಜೀವನ ಪರ್ಯಂತ ತನ್ನ ಕಾಲ ಮೇಲೆ ನಿಲ್ಲಲಾರ ಎಂದು ಹೇಳಿದ್ದಾರೆ.

           ಬಾಲಕನ ಪೋಷಕರು ಶಿಬಿರದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ವಿಷಯ ನ್ಯಾಯಾಲಯದಲ್ಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries