HEALTH TIPS

ಆಸಿಯಾನ್-ಭಾರತ ಶೃಂಗಸಭೆ: ಅ. 10,11ಕ್ಕೆ ಮೋದಿ ಲಾವೊಸ್‌ ಭೇಟಿ

      ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ 10 ಮತ್ತು 11ರಂದು ಎರಡು ದಿನ ಲಾವೊಸ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಂಗಳವಾರ ತಿಳಿಸಿದೆ.

       ಈ ಭೇಟಿ ವೇಳೆ ಪ್ರಧಾನಿ ಮೋದಿ ಅವರು, ಲಾವೊಸ್‌ನಲ್ಲಿ ನಡೆಯಲಿರುವ 21ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅದು ಹೇಳಿದೆ.

          ಲಾವೊಸ್‌ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಕ್ಟೋಬರ್ 10-11ರಂದು ಭೇಟಿ ನೀಡಲಿದ್ದಾರೆ. ಈ ಶೃಂಗಸಭೆಗಳಲ್ಲಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

           'ಈ ವರ್ಷ ಭಾರತ, ಪೂರ್ವ ಕೇಂದ್ರೀತ ನೀತಿಯನ್ನು ಅನುಸರಿಸುತ್ತ ಒಂದು ದಶಕವಾಗಲಿದ್ದು, ಆಸಿಯಾನ್‌ ಜೊತೆಗಿನ ಸಂಬಂಧವು ಪೂರ್ವ ಕೇಂದ್ರೀತ ನೀತಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ತಂತ್ರಕ್ಕೆ ಆಧಾರ ಸ್ಥಂಭವಾಗಿದೆ' ಎಂದು ಎಂಇಎ ಹೇಳಿದೆ.

               ಆಸಿಯಾನ್-ಭಾರತ ಶೃಂಗಸಭೆಯು 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ' ಮೂಲಕ ಭಾರತ-ಆಸಿಯಾನ್ ಸಂಬಂಧಗಳ ಪ್ರಗತಿ ಪರಿಶೀಲನೆ ಮತ್ತು ದೇಶಗಳ ನಡುವೆ ಸಂಬಂಧ ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries