ಪೆರ್ಲ: ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ಖಾಲಿ ಇರುವ ಎಲ್.ಪಿ.ಎಸ್.ಟಿ. ಕನ್ನಡ -1 ( ರಜಾ ಹುದ್ದೆ) ಮತ್ತು ಎಚ್.ಎಸ್.ಟಿ. ಇಂಗ್ಲೀಷ್ -1 (ಕನ್ನಡ ಮಾದ್ಯಮ) ಶಿಕ್ಷಕ ಹುದ್ದೆಗಳಿಗೆ ದಿನವೇತನದಡಿ ನೇಮಕಾತಿ ನಡೆಸಲು ಅ.10ರಂದು ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಅರ್ಹ ಆಸಕ್ತ ಉದ್ಯೋಗಾರ್ಥಿಗಳು ಅಸಲಿ ಪ್ರಮಾಣಪತ್ರಗಳೊಂದಿಗೆ ಹಾಜರಿರುವಂತೆ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.