ಪಲಕ್ಕಾಡ್: ಕಾಂಗ್ರೆಸ್ ಪಕ್ಷ ತೊರೆದು ಎಡ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಪಿ. ಸರಿನ್ ವಿರುದ್ಧ ಇದೀಗ ಗಂಭೀರ ಆರೋಪ ಎಸಗಿರುವ ಕೆಪಿಸಿಸಿ ಡಿಜಿಟಲ್ ಮೀಡಿಯಾ ಸೆಲ್ ಸದಸ್ಯೆ ವೀಣಾ ಎಸ್. ನಾಯರ್, ಈ ಕುರಿತು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವರವಾಗಿ ಬರೆದು, ತಮ್ಮ ಬೇಸರ ಹೊರಹಾಕಿದ್ದಾರೆ.

ನಾನೇ ಮೊದಲ ಗುರಿ: ಶೀಘ್ರವೇ ಸತ್ಯವೆಲ್ಲ ಹೊರಬರಲಿ:
'ಕೆಪಿಸಿಸಿ ಡಿಎಂಸಿ ಸಂಚಾಲಕರಾಗಿ ಸರಿನ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಗಂಭೀರ ವಿಷಯಗಳ ಬಗ್ಗೆ ನಾನು ಮತ್ತು ನನ್ನ ಸಹೋದ್ಯೋಗಿಗಳು ಈ ವರ್ಷದ ಜನವರಿಯಲ್ಲಿ ದೂರು ಸಲ್ಲಿಸಿದ್ದೆವು. ಸರಿನ್ 25 ಸದಸ್ಯರ ಡಿಎಂಸಿಸಿ DMCC ತಂಡದೊಳಗೆ ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರದ್ದೇ ಸ್ವಂತ ಅಭಿಮಾನಿ ಗುಂಪುಗಳನ್ನು ರಚಿಸಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಅವರ ಪಕ್ಷದ ಭವಿಷ್ಯಕ್ಕೆ ಹಾನಿಕಾರಕ' ಎಂದು ವೀಣಾ ಆರೋಪಿಸಿದ್ದಾರೆ.
ನಾನೇ ಮೊದಲ ಗುರಿ
ವೀಣಾ ಹೇಳಿರುವ ಪ್ರಕಾರ, 'ಇತರ ಸದಸ್ಯರ ಗುರುತುಗಳ ಗೌಪ್ಯತೆಯನ್ನು ಒತ್ತಾಯಿಸುವ ಮೂಲಕ ಸರಿನ್ ಆರಂಭದಲ್ಲಿ ಡಿಎಂಸಿಯೊಳಗೆ ತಮ್ಮ ಪ್ರಾಬಲ್ಯವನ್ನು ಪ್ರತಿಪಾದಿಸಲು ಪ್ರಯತ್ನಿಸಿದ್ದಾರೆ. ತಮ್ಮನ್ನು ಇಷ್ಟಪಡದವರನ್ನು ಅವರು ನೇರವಾಗಿ ಗುರಿ ಮಾಡಿಕೊಂಡಿದ್ದಾರೆ. ಪ್ರತಿವಾರ ತನ್ನ ವಿರುದ್ಧ ಇರುವವರ ಮೇಲೆ ದಾಳಿ ಮಾಡಲೆಂದೇ ಆನ್‌ಲೈನ್ ಸಭೆಗಳನ್ನು ಬಳಸಿಕೊಳ್ಳುತ್ತಿದ್ದರು. ಆ ವ್ಯಕ್ತಿಯ ಟಾರ್ಗೆಟ್ನಲ್ಲಿ ನಾನೇ ಮೊದಲ ಗುರಿ' ಎಂದಿದ್ದಾರೆ.
ಶೀಘ್ರವೇ ಸತ್ಯವೆಲ್ಲ ಹೊರಬರಲಿ
ಸರಿನ್ ಪಕ್ಷದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ವೀಣಾ, 'ಕಳೆದ ಹತ್ತು ತಿಂಗಳಲ್ಲಿ ನನಗೆ ಶಾಂತಿ, ನೆಮ್ಮದಿ ಸಿಕ್ಕಿಲ್ಲ. 2024ರ ಜನವರಿ 1ರಿಂದ ಇಂದಿನವರೆಗೂ ನಾನು ನೆಮ್ಮದಿಯಿಂದ ನಿದ್ದೆ ಮಾಡಿಲ್ಲ. ನಾನು ಕೇಳುವುದು, ಪರಿತಪಿಸುವುದು ಕೇವಲ ನ್ಯಾಯ ಮತ್ತು ಸತ್ಯಕ್ಕಾಗಿ. ಶೀಘ್ರವೇ ಸತ್ಯವೆಲ್ಲ ಹೊರಬರಲಿ' ಎಂದು ಹೇಳಿದ್ದಾರೆ,