ಕಾಸರಗೋಡು : ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಪಾಂಗೋಡು ಶ್ರೀ ದುರ್ಗಾಪಮೇಶ್ವರಿ ಸಾಂಸ್ಕøತಿಕ ಘಟಕ, ವಿಜ್ಡಮ್ ಇನ್‍ಸ್ಟಿಟ್ಯೂಟ್ ನೆಟ್ವರ್ಕ್, ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ನಡೆಯುವ 'ಕಾಸರಗೋಡು ದಸರಾ ಕವಿಶ್ರೇಷ್ಠ ಪ್ರಶಸ್ತಿ- 2024 ಪ್ರದಾನ ಸಮಾರಂಭವು ಅ.6ರಂದು ಅಪರಾಹ್ನ 2ರಿಂದ ನಡೆಯಲಿದೆ.
ಪ್ರಸ್ತುತ ಸಾಲಿನ ಪ್ರಶಸ್ತಿಗೆ ಹಿರಿಯ ಕವಿಗಳಾದ ಡಾ. ಕೆ. ಜಿ ವೆಂಕಟೇಶ್, ರಾಧಾಕೃಷ್ಣ ಕೆ ಉಳಿಯತ್ತಡ್ಕ, ಪಿ. ವಿ ಪ್ರದೀಪ್ ಕುಮಾರ್, ಮಂಗಳೂರು, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಲಕ್ಷ್ಮೀ ವಿ ಭಟ್ ಮಂಜೇಶ್ವರ, ಜಯಾನಂದ ಪೆರಾಜೆ, ನಾಟಕ ಭಾರ್ಗವ ಕೆಂಪರಾಜು, ವಿರಾಜ್ ಅಡೂರು, ಸೀತಾಲಕ್ಷ್ಮಿ ವರ್ಮ ವಿಟ್ಲ, ಶಾಂತಾ ಪುತ್ತೂರು, ರತ್ನಾ ಕೆ ಭಟ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಕೆ. ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.