ಕೀವ್: ಉಕ್ರೇನ್ ಹಾರಿಸಿದ 110 ಡ್ರೋನ್‌ಗಳನ್ನು ಭಾನುವಾರ ಹೊಡೆದುರುಳಿಸಿರುವುದಾಗಿ ರಷ್ಯಾ ತಿಳಿಸಿದೆ. ಉಕ್ರೇನ್‌ನ ಕ್ರೀವಿ ರಿಯಾ ನಗರದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 17 ಮಂದಿ ಗಾಯಗೊಂಡಿದ್ದಾರೆ.
ಕೀವ್: ಉಕ್ರೇನ್ ಹಾರಿಸಿದ 110 ಡ್ರೋನ್‌ಗಳನ್ನು ಭಾನುವಾರ ಹೊಡೆದುರುಳಿಸಿರುವುದಾಗಿ ರಷ್ಯಾ ತಿಳಿಸಿದೆ. ಉಕ್ರೇನ್‌ನ ಕ್ರೀವಿ ರಿಯಾ ನಗರದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 17 ಮಂದಿ ಗಾಯಗೊಂಡಿದ್ದಾರೆ.
ರಷ್ಯಾದ ಏಳು ಪ್ರಾಂತ್ಯಗಳನ್ನು ಗುರಿಯಾಗಿಸಿ ರಾತ್ರಿಯಿಡೀ ಡ್ರೋನ್ ದಾಳಿ ನಡೆದಿದೆ.
ಝೆರ್‌ಜಿನ್‌ಸ್ಕ್ ಕೈಗಾರಿಕಾ ಪ್ರದೇಶದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಗವರ್ನರ್ ಗ್ಲೆಬ್ ನಿಕಿತಿನ್ ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಏಕಕಾಲದಲ್ಲಿ ರಷ್ಯಾ ಮೇಲೆ 125 ಡ್ರೋನ್ ಹಾರಿಸಿದ್ದ ಬಳಿಕ, ಉಕ್ರೇನ್ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ.
17 ಮಂದಿಗೆ ಗಾಯ:
ಕ್ರೀವಿ ರಿಯಾ ನಗರದ ಮೇಲೆ ರಷ್ಯಾದ ಎರಡು ಕ್ಷಿಪಣಿಗಳು ಅಪ್ಪಳಿಸಿದ ಪರಿಣಾಮ 17 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾತ್ರಿ ನಡೆದ ಈ ದಾಳಿಯಲ್ಲಿ ಹಲವು ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿವೆ ಎಂದು ಸ್ಥಳೀಯ ಸಂಸ್ಥೆಯ ಮುಖ್ಯಸ್ಥ ಅಲೆಕ್ಸಾಂಡರ್ ವಿಲ್ಕಲ್ ಮಾಹಿತಿ ನೀಡಿದ್ದಾರೆ.