ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ, ಚೀನಾ ಬಳಿ ಹೆಚ್ಚುವರಿ 10,000 ಕೋಟಿ ಯುವಾನ್ (₹11,700 ಕೋಟಿ) ಸಾಲವನ್ನು ಕೋರಿದೆ ಎಂದು ಭಾನುವಾರ ಮಾಧ್ಯಮ ವರದಿಗಳು ತಿಳಿಸಿವೆ.
ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ, ಚೀನಾ ಬಳಿ ಹೆಚ್ಚುವರಿ 10,000 ಕೋಟಿ ಯುವಾನ್ (₹11,700 ಕೋಟಿ) ಸಾಲವನ್ನು ಕೋರಿದೆ ಎಂದು ಭಾನುವಾರ ಮಾಧ್ಯಮ ವರದಿಗಳು ತಿಳಿಸಿವೆ.
ಅಮೆರಿಕದಲ್ಲಿ ನಡೆದ ಐಎಮ್‌ಎಫ್ ಹಾಗೂ ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆ ವೇಳೆ ಚೀನಾದ ಹಣಕಾಸು ಸಚಿವ ಲಿಯಾವೊ ಮಿನ್ ಅವರನ್ನು ಭೇಟಿಯಾದ ಪಾಕಿಸ್ತಾನ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಅವರು ಕರೆನ್ಸಿ ಸ್ವಾಪ್ ಒಪ್ಪಂದದ ಅಡಿಯಲ್ಲಿ ಚೀನಾದಿಂದ ತಮ್ಮ ದೇಶಕ್ಕೆ ಸಿಗಬಹುದಾದ ಒಟ್ಟು ಸಾಲ ಸೌಲಭ್ಯವನ್ನು 40 ಶತಕೋಟಿ ಯುವಾನ್‌ಗೆ ಹೆಚ್ಚಿಸುವಂತೆ ವಿನಂತಿಸಿದರು.
ಈಗಾಗಲೇ ಚೀನಾ ₹36,000 ಕೋಟಿ ಸಾಲವನ್ನು ಪಾಕಿಸ್ತಾನಕ್ಕೆ ನೀಡಿದೆ. ಹೀಗಾಗಿ ಈ ಪ್ರಸ್ತಾವಕ್ಕೆ ಚೀನಾ ಒಪ್ಪಿಗೆ ಸೂಚಿಸಿದರೆ ಒಟ್ಟು ಸಾಲದ ನೆರವು ₹47,900 ಕೋಟಿಗೆ ತಲುಪಲಿದೆ ಎಂದು 'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.
ಹೆಚ್ಚಿನ ಸಾಲ ನೀಡುವಂತೆ ಚೀನಾ ಬಳಿ ಪಾಕಿಸ್ತಾನ ವಿನಂತಿ ಮಾಡುತ್ತಲೇ ಬಂದಿದೆ. ಆದರೆ ಈ ಹಿಂದಿನ ಪ್ರಸ್ತಾವಗಳನ್ನು ಚೀನಾ ತಿರಸ್ಕರಿಸಿದೆ. ಆದರೂ ಚೀನಾವು ಪಾಕಿಸ್ತಾನವು ಈಗಿರುವ ಸಾಲ ಮರುಪಾವತಿ ಮಾಡಬೇಕಿರುವ ಅವಧಿಯನ್ನು ಮೂರು ವರ್ಷಗಳ ವಿಸ್ತರಿಸಿ 2027ಕ್ಕೆ ಮುಂದೂಡಿದೆ.