ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ 17ನೇ ವರ್ಷದ ಶಾರದೋತ್ಸವ ಅಕ್ಟೋಬರ್ 11 ಮತ್ತು 12ರಂದು ಬದಿಯಡ್ಕ ಗುರುಸದನದಲ್ಲಿ ಜರಗಲಿದೆ. ಅ.11ರಂದು ಶುಕ್ರವಾರ ಬೆಳಗ್ಗೆ 6.30ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ ಅವರಿಂದ ಬೆಳಗಿನ ಪೂಜೆ, ಮಹಾಗಣಪತಿ ಹೋಮ, ಶಾರದಾಂಬ ಮಹಿಳಾ ಭಜನ ಸಂಘದವರಿಂದ ಭಜನೆ, 9 ಗಂಟೆಗೆ ನಿವೃತ್ತ ವಿದ್ಯುತ್ ಇಲಾಖೆಯ ಉದ್ಯೋಗಿ ಐತ್ತಪ್ಪ ನಾಯ್ಕ ವಿದ್ಯಾಗಿರಿ ಅವರಿಂದ ಧ್ವಜಾರೋಹಣ, 9.30ಕ್ಕೆ ಆಯುಧ ಪೂಜೆ, 10 ಕ್ಕೆ ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭ, ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ. ಶಾರದೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿ ಗೋವಿಂದ ನಾಯ್ಕ ದೀಪಬೆಳಗಿಸಿ ಉದ್ಘಾಟಿಸುವರು.. ವೈ. ನಾರಾಯಣ ನಾಯ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ. 1 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ವಿದುಷಿ ಗೀತಾ ಸಾರಡ್ಕ ಮತ್ತು ಶಿಷ್ಯರಿಂದ ನಡೆಯಲಿದೆ. 2 ರಿಂದ ಕಲಾ ಸಾಂಸ್ಕøತಿಕ ಕಾರ್ಯಕ್ರಮ, ಭಕ್ತಿಗೀತೆ, ಭರತನಾಟ್ಯ, ಸಮೂಹ ನೃತ್ಯ, ಮರಾಟಿ ಭಾಷೆಯಲ್ಲಿ ಭಾಷಣ, ಮಿಮಿಕ್ರಿ, ಸಂಗೀತ, ಜರಗಲಿದೆ. ಸಂಜೆ 5.30ರಿಂದ ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ಪುರಸ್ಕøತ ಜಯರಾಮ ಪಾಟಾಳಿ ಪಡುಮಲೆ ಇವರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ಕೊಲ್ಲೂರು ಕ್ಷೇತ್ರ ಮಹಾತ್ಮೆ. ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.
ಅ.12 ಶನಿವಾರ ಬೆಳಗ್ಗೆ 7 ಕ್ಕೆ ಉಷಃಪೂಜೆ, 8ರಿಂದ ಶ್ರೀ ಧರ್ಮಶಾಸ್ತಾ ಭಜನಾ ಸಂಘ ನೀರ್ಚಾಲು ಇವರಿಂದ ಭಜನೆ, 9 ಕ್ಕೆ ವಿದ್ಯಾರಂಭÀ, 9.30ಕ್ಕೆ ಸುಮಾಶ್ರೀ ಇಡಿಯಡ್ಕ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ, 11 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾರದೋತ್ಸವ ಸಮಿತಿಯ ಅಧ್ಯಕ್ಷ ಕೇಶವ ವಿದ್ಯಾನಗರ ಅಧ್ಯಕ್ಷತೆ ವಹಿಸುವರು. ನಿವೃತ್ತ ಕೊಚ್ಚಿ ಕಸ್ಟಂಸ್ ಅಸಿ.ಕಮಿಶನರ್ ಶಿವಾಜಿ ಹಾಗೂ ಮೂಡಬಿದಿರೆ ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ರಾಮಚಂದ್ರ ಕೆಂಬಾರೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಬೆಟ್ಟಂಪಾಡಿ ಪ್ರಥಮದರ್ಜೆ ಕಾಲೇಜು ಗ್ರಂಥಪಾಲಕ ರಾಮ ಕಳುವಾಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಯಂತಿ ಚಕ್ರೇಶ್ವರ್ ಮತ್ತು ಮಕ್ಕಳು ಮಲ್ಲಡ್ಕ ನೀಡುವ ಆರ್. ಚಕ್ರೇಶ್ವರ್ ಸ್ಮರಣಾರ್ಥ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಬಾಲಕೃಷ್ಣ ಕೆ.ಪನತ್ತಡಿ, ವಾಮನ ನಾಯ್ಕ ಪಜ್ಜ, ಸತೀಶ್ ಪಿಲಿಕೂಡ್ಲು, ಕೆ.ಕೆ.ನಾಯ್ಕ ಮಂಗಳೂರು ಶುಭಾಶಂಸನೆಗೈಯುವರು. ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ. ಅಪರಾಹ್ನ 2.30ರಿಂದ ಶಾರದಾ ದೇವಿಯ ಶೋಭಾಯಾತ್ರೆ ಆರಂಭ. ಗುರುಸದನದಿಂದ ಹೊರಟು ಬದಿಯಡ್ಕ ಪೇಟೆಯ ಮೂಲಕ ಸಾಗಿ ಪೆರಡಾಲ ವರದಾ ನದಿಯಲ್ಲಿ ವಿಗ್ರಹ ಜಲಸ್ಥಂಭನ ನಡೆಯಲಿದೆ. ಘೋಷಯಾತ್ರೆಯಲ್ಲಿ ಸಿಂಗಾರಿಮೇಳ, ಮುತ್ತುಕೊಡೆ ಹಾಗೂ ವಿವಿಧ ತಂಡಗಳಿಂದ ಕುಣಿತ ಭಜನೆ ಪ್ರದರ್ಶನಗಳಿರುವುದು.