ಪೆರ್ಲ : ಕುಂಬಳೆ ಉಪಜಿಲ್ಲಾ 63ನೇ ಶಾಲಾ ಕಲೋತ್ಸವ ಈ ಬಾರಿ ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನವೆಂಬರ್ 11,12,18,19,20 ದಿನಾಂಕಗಳಲ್ಲಾಗಿ ಜರಗಲಿದ್ದು ಇದರ ಸಿದ್ಧತೆ ಸಭೆ ಜರಗಿತು.
ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷೆ ರಮ್ಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ್, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಎಣ್ಮಕಜೆ ಪಂಚಾಯತಿ ಸದಸ್ಯ ರಾಮಚಂದ್ರ ಎಂ, ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಕಲೋತ್ಸವದ ಜನರಲ್ ಕನ್ವೀನರ್ ಶಾಸ್ತಾ ಕುಮಾರ್, ಹೆಲ್ತ್ ಇನ್ಸ್ ಪೆಕ್ಟರ್ ಪ್ರಸನ್ನ ಕುಮಾರ್, ಶಾಲಾ ರಕ್ಷಕ ಶಿಕ್ಷಕ ಸಂಘಧ ಪದಾಧಿಕಾರಿಗಳಾದ ಅಬುಬ್ಬಕ್ಕರ್ ಪೆರ್ದನೆ, ಉಮ್ಮಾರ್ ಕಂಗಿನಮೂಲೆ, ಪುಷ್ಪಾ, ಪ್ರಜ್ವಲಿ, ಯುಪಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಹೈಸ್ಕೂಲ್ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್ ಎಂ.ಪಿ ಸ್ವಾಗತಿಸಿ, ಸುಜೀತ ಟೀಚರ್ ವಂದಿಸಿದರು.