ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಅಕ್ಟೋಬರ್ 3 ರಿಂದ 12 ರ ವರೆಗೆ ನವರಾತ್ರೋತ್ಸವವು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ಅ.3 ರಂದು ಶ್ರೀ ಗಾಯತ್ರೀ ಮಾತೆಗೆ ಪಂಚಾಮೃತಾಭಿಷೇಕ, ಗಣಹೋಮ, .4 ರಂದು ಸಂಜೆ 6.ರಿಂದ ಪ್ರಶಾಂತ್ ವರ್ಮಾ ತ್ರಿಶೂರ್ ರವರ “ಭಕ್ತಿಗಾನ ಸುಧಾ”, 8 ರಂದು ಲಲಿತ ಪಂಚಮೀ, .9 ರಂದು ಬೆಳಿಗ್ಗೆ ಪೂಜೆಯ ನಂತರ ಶಾರದಾ ಪ್ರತಿಷ್ಠೆ, ನಂತರ ವಿದ್ಯಾರ್ಥಿಗಳಿಗಾಗಿ ಸರಸ್ವತೀ ಹವನ, 11 ರಂದು ದುರ್ಗಾಷ್ಟಮೀ, ಪೂರ್ವಾಹ್ನ 11.00ಕ್ಕೆ ವಿದುಷಿ ಉಷಾ ಈಶ್ವರ್ ಭಟ್ ಕಾಸರಗೋಡು ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, .12 ರಂದು ಪ್ರಾತ:ಕಾಲ ಶ್ರೀ ಗಾಯತ್ರೀ ಮಾತೆಗೆ ವಿಶೇಷ ಸೀಯಾಳಾಭಿಷೇಕ, ಬೆಳಿಗ್ಗೆ 7.30 ಕ್ಕೆ ವಿದ್ಯಾರಂಭ, .8.00 ಕ್ಕೆ ವಾಹನಪೂಜೆ, ಮಧ್ಯಾಹ್ನ ಮಹಾಪೂಜೆಯ ಬಳಿಕ ಶ್ರೀ ಮಠದ ನಕ್ಷತ್ರವನದ ಆನಂದತೀರ್ಥ ಪುಷ್ಕರಿಣಿಯಲ್ಲಿ ಶಾರದಾವಿಸರ್ಜನೆ. ಅದೇ ದಿನ ಬೆಳಿಗ್ಗೆ 9.00 ರಿಂದ ಕು.ಗಾಯತ್ರಿ ಮತ್ತು ಕು. ಶ್ರಾವಣ್ಯ ಕೊಂಡೆವೂರು ಇವರ “ಸಂಗೀತ ಕಾರ್ಯಕ್ರಮ” ನಡೆಯಲಿದೆ. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವಿಯ ಅನುಗ್ರಹಭಾಜನರಾಗಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.