ನವದೆಹಲಿ: ಮುಂಗಡವಾಗಿ ಸೀಟು ಕಾಯ್ದಿರಿಸುವಿಕೆ ಅವಧಿಯನ್ನು ರೈಲ್ವೆ ಮಂಡಳಿಯು 120 ದಿನಗಳ ಬದಲು 60 ದಿನಗಳಿಗೆ ಇಳಿಸಿದೆ.
ನವದೆಹಲಿ: ಮುಂಗಡವಾಗಿ ಸೀಟು ಕಾಯ್ದಿರಿಸುವಿಕೆ ಅವಧಿಯನ್ನು ರೈಲ್ವೆ ಮಂಡಳಿಯು 120 ದಿನಗಳ ಬದಲು 60 ದಿನಗಳಿಗೆ ಇಳಿಸಿದೆ.
'120 ದಿನಗಳಿಗೂ ಮುನ್ನವೇ ಮುಂಗಡವಾಗಿ ಸೀಟು ಕಾಯ್ದಿರಿಸಲು ಈಗ ಇರುವ ಅವಕಾಶವನ್ನು 2024ರ ನವೆಂಬರ್ 1ರಿಂದ 60 ದಿನಕ್ಕೆ ಇಳಿಸಲು ನಿರ್ಧರಿಸಲಾಗಿದೆ' ಎಂದು ಮಂಡಳಿಯು ಗುರುವಾರ (ಅಕ್ಟೋಬರ್ 16) ಪ್ರಕಟಿಸಿದೆ.
'ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಅವಧಿ' (ಎಆರ್‌ಪಿ) ನಿಯಮದಂತೆ ಅಕ್ಟೋಬರ್ 31ರ ವರೆಗೆ ಕಾಯ್ದಿರಿಸುವ ಎಲ್ಲ ಟಿಕೆಟ್‌ಗಳಿಗೆ 120 ದಿನಗಳ ಅವಕಾಶವಿರುತ್ತದೆ.
ಎಆರ್‌ಪಿ ಕಡಿತಕ್ಕೆ ಕಾರಣವೇನು ಎಂಬುದನ್ನು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿಲ್ಲ. ಆದರೆ, ವಿದೇಶಿ ಪ್ರವಾಸಿಗರಿಗೆ ಕಲ್ಪಿಸಲಾಗಿರುವ 365 ದಿನಗಳ ಅವಕಾಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಖಚಿತಪಡಿಸಿದೆ.
ರೈಲ್ವೆ ಇಲಾಖೆಯು, ಎಪಿಆರ್ ಮಿತಿಯನ್ನು 2015ರ ಮಾರ್ಚ್ 25ರಂದು 60 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಿತ್ತು